ಶಾಸಕ ಭರತ್ ಶೆಟ್ಟಿಯವರ ವೈಫಲ್ಯವೇ ಶಾಲೆ ಭೂ ವಿವಾದಕ್ಕೆ ಕಾರಣ – ಮಾಜಿ ಶಾಸಕ ಮೊಯಿದಿನ್ ಬಾವ

ಕರಾವಳಿ

ಸುರತ್ಕಲ್ : ಕಳೆದ 30ವರ್ಷಗಳಿಂದ ನಡೆಯುತ್ತಿರುವ ಸರಕಾರಿ ಶಾಲೆಯ ಭೂಮಿಯನ್ನು ವಿವಾದಗೊಳಿಸಲು ಶಾಲೆಯ ಭೂಮಿಯನ್ನು ವಸತಿ ವಲಯ ಮಾಡಿ ಮಾರಾಟ ಮಾಡುವ ಹಂತದವರೆಗೆ ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ಲೋಪವನ್ನು ಒಪ್ಪಲು ಸಾಧ್ಯವಿಲ್ಲ. ಮಂಗಳೂರು ಉತ್ತರ ಕ್ಷೇತ್ರದ ಶಾಸಕರ ವೈಫಲ್ಯವೇ ಶಾಲೆಯ ಭೂ ವಿವಾದಕ್ಕೆ ಕಾರಣ ಎಂದು ಮಾಜಿ ಶಾಸಕ ಬಿ. ಎ ಮೊಯಿದಿನ್ ಬಾವ ಆರೋಪಿಸಿದರು. ಅವರು ಇಂದು ಕಾನ-ಕಟ್ಲ ಜನತಾಕಾಲನಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸರಕಾರಿ ಶಾಲೆಯ Arya ವಿವಾದಕ್ಕೆ ಕಾರಣರಾದ ಎಲ್ಲಾ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಸರಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಆಗ್ರಹಿಸಿ ಸುರತ್ಕಲ್ ನಾಡ ಕಚೇರಿ ಚಲೋ ಹೋರಾಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇಲ್ಲಿನ ಶಾಸಕರಿಗೆ ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಯ ಉಳಿಸುವ ಬಗ್ಗೆ ಕಾಳಜಿ ಇಲ್ಲ. ಶಾಲೆಯ ಸ್ವಾಧೀನ ಇರುವ ಜಾಗದಲ್ಲಿ ಅಕ್ರಮ ಮನೆಗಳು ನಿರ್ಮಾಣಗೊಳ್ಳುತ್ತಿದೆ ಶಾಸಕರು ಮೌನವಾಗಿರುವುದು ಶಾಸಕರ ಶಾಮೀಲಾತಿಯಲ್ಲಿ ಭೂ ಅತಿಕ್ರಮಣ ನಡೆದಿರುವ ಬಗ್ಗೆ ಸಂದೇಹ ಮೂಡುತ್ತಿದೆ ಎಂದರು. ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾತಿಗೊಂಡು ನಿರ್ಮಾಣಗೊಳ್ಳುತ್ತಿರುವ 800ಆಶ್ರಯ ಮನೆಗಳಿಗೆ ಬಡವರಿಗಾಗಿ ಈ ಸರಕಾರಿ ಶಾಲೆ ಯನ್ನು ಜಿಲ್ಲಾಡಳಿತ ಉಳಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಹೋರಾಟ ಸಮಿತಿಯ ಸಂಚಾಲಕ ಬಿ.ಕೆ ಇಮ್ತಿಯಾಝ್ ಮಾತನಾಡಿ ಶಾಲೆಯ ಭೂ ವಿವಾದದಲ್ಲಿ ಅನೇಕ ಅಧಿಕಾರಿಗಳ ಕೈವಾಡ ಇದೆ ಭೂ ಮಾಪಕನೊಬ್ಬನನ್ನು ಅಮಾನತು ಮಾಡಿ ಜಿಲ್ಲಾಡಳಿತ ಹೋರಾಟದ ಬಿಸಿಯನ್ನು ತಣಿಸಲು ನೋಡುತ್ತಿದೆ. ಸುರತ್ಕಲ್ ನಾಡ ಕಚೇರಿ ಭ್ರಷ್ಟಾಚಾರದ ಕೇಂದ್ರವಾಗಿದೆ ಸಾರ್ವಜನಿಕರು ಲಂಚ ನೀಡದೆ ಯಾವುದೇ ಕೆಲಸಗಲಾಗುವುದಿಲ್ಲ. ಇಲ್ಲಿ ನಿವೃತ್ತರಾದ ಅಧಿಕಾರಿಗಳು ಕಚೇರಿಯಲ್ಲೇ ಟಿಕಾಣಿ ಹೂಡಿ ಜನರನ್ನು ದೋಚುತ್ತಿದ್ದಾರೆ ಎಂದು ಅವರು ಆಪಾದಿಸಿದರು. ಸರಕಾರಿ ಶಾಲೆಯ ಉಳಿಸುವ ಹೋರಾಟವನ್ನು ಬಹಳ ಬದ್ಧತೆಯಿಂದ ಮುಂದುವರಿಸುತ್ತೇವೆ ಎಂದರು.

ಮಾಜಿ ನಗರಪಾಲಿಕೆ ಸದಸ್ಯರಾದ ದಯಾನಂದ ಶೆಟ್ಟಿ, ಹರೀಶ್ ಕೆ ಸುರತ್ಕಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಹೋರಾಟ ಸಮಿತಿಯ ಪ್ರಮುಖರಾದ ಹಮ್ಮಬ್ಬ ಬದವಿದೆ, ವಾರಿಜ ಸಾಲ್ಯಾನ್ ಮಾತನಾಡಿದರು.ಎಸ್ ಡಿ ಎಂ ಸಿ ಅಧ್ಯಕ್ಷೆ ಕೈರುನ್ನಿಸ,ಜೋಕಟ್ಟೆ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ,
ಡಿವೈಎಫ್ಐ ಮುಖಂಡರಾದ ಬಿಕೆ ಮಕ್ಸೂದ್, ಶ್ರೀನಾಥ್ ಕುಲಾಲ್, ಶೈಫರ್ ಆಲಿ, ರಿಜ್ವಾನ್ ಹರೇಕಳ, ಮುವಾಜ್, ಕಾಂಗ್ರೆಸ್ ಮುಖಂಡರಾದ ಹಾರಿಸ್ ಬೈಕಂಪಾಡಿ, ಹೋರಾಟ ಸಮಿತಿಯ ಪ್ರಮುಖರಾದ ಉಮರ್ ಫಾರೂಕ್, ಶರೀಫ್ ಜನತಾಕಾಲನಿ, ಶಬನ, ಸಿಸಿಲಿಯ ಡಿಸೋಜಾ, ಯಶೋಧ,ಅಸ್ಕಾಫ್,ಅಶ್ರಫ್, ಆಸೀಫ್ ದಯಾನಂದ ಶೆಟ್ಟಿ ಜನತಾಕಾಲನಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಬಷೀರ್ ಕಾನ,ರಶೀದ್ ಮುಕ್ಕ, ಹನೀಫ್ ಇಡ್ಯಾ, ಐ ಮೊಹಮ್ಮದ್, ಸಾದಿಕ್ ಕಿಲ್ಪಾಡಿ, ಭಾರತಿ, ಕ್ರಿಸ್ತಿನ ಡಿಸೋಜಾ, ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಟನೆಗೆ ಮುನ್ನ ಸುರತ್ಕಲ್ ಮೆಸ್ಕಾಂ ಕಚೇರಿ ಬಳಿಯಿಂದ ನಾಡ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಶಾಲೆ ಉಳಿಸಲು ಘೋಷಣೆಗಳನ್ನು ಕೂಗಿದರು.

ಮನವಿ ಸ್ವೀಕರಿಸಿದ
ತಹಶೀಲ್ದಾರ್
ಪ್ರತಿಭಟನೆ ಆರಂಭ ಆಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ಬಾರದೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದ ಹೋರಾಟಗಾರರು ಮನವಿ ಸ್ವೀಕರಿಸಲು ಬಂದ ಉಪ ತಹಸೀಲ್ದಾರ್ ಅವರನ್ನು ವಾಪಸ್ ಕಳಿಸಿದರು. ನಂತರ ಮಂಗಳೂರು ತಹಶೀಲ್ದಾರ್ ಬಂದು ಮನವಿ ಸ್ವೀಕರಿಸಿ ಶಾಲೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಸುರತ್ಕಲ್ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.