ವಿಶ್ವದ ಹಲವಾರು ದೇಶಗಳು ಮತ್ತೊಮ್ಮೆ ಕೋವಿಡ್ ಪ್ರಕರಣಗಳ ಎದುರಿಸುತ್ತಿವೆ. ಇದು ಜಾಗತಿಕ ಆತಂಕಕ್ಕೂ ಕಾರಣವಾಗಿದೆ. ಕೋವಿಡ್‌ನಿಂದ ಇಡೀ ವಿಶ್ವವೇ ಚೇತರಿಸಿಕೊಳ್ಳಲಾದಷ್ಟು ಪರಿಣಾಮ ಎದುರಿಸಿ ಬಿಟ್ಟಿದೆ. ಹೀಗಾಗಿ ಈ ದಿನಗಳಲ್ಲಿ ಕೇಳಿಬರುತ್ತಿರುವ ಹೊಸ ರೂಪಾಂತರಗಳು ಮತ್ತಷ್ಟು ಭೀತಿ ಸೃಷ್ಟಿಸಿವೆ. ಅದರಲ್ಲೂ ಯೂರೋಪ್ ಖಂಡದಲ್ಲಿ ಕೋವಿಡ್ ಮತ್ತೆ ಆವರಿಸುತ್ತಿದೆ. ಆದರೆ ಕೋವಿಡ್‌ಗಿಂತಲೂ ಅದರ ನಂತರದ ಪರಿಣಾಮವೇ ಅತ್ಯಂತ ಭೀಕರ ಎನಿಸುತ್ತಿದೆ. ಇತ್ತೀಚಿಗೆ ನಾವು ಹೃದಯಾಘಾತದಂತಹ ಪ್ರಕರಣಗಳನ್ನು ಎದುರಿಸುತ್ತಿರುವುದು ಸಹ ಇದರ ಕೊಡುಗೆಯಾಗಿದೆ. ಆರೋಗ್ಯವಂತರೂ ಸಹ ಹೃದಯಾಘಾತದಂತಹ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇನ್ನು 2024ರಲ್ಲಿ ಈ ಹೃದಯಾಘಾತದಂತಹ ಪಿಡುಗು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಹೊಸದಾಗಿ ಕೇಳಿಬಂದಿರುವ JN.1 ಎಂಬ ಕೋವಿಡ್ ರೂಪಾಂತರವು ಹೃದಯಾಘಾತದ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಜಪಾನ್‌ನ ಉನ್ನತ ಸಂಸ್ಥೆಯಾದ ರಿಕೆನ್‌ನ ಸಂಶೋಧಕರು ವರದಿಯೊಂದರಲ್ಲಿ ಈ ಎಚ್ಚರಿಕೆ ನೀಡಿದ್ದಾರೆ, ಕೊರೊನ ವೈರಸ್ ಮಾನವ ಜೀವಕೋಶಗಳಿಗೆ ಅಂಟಿಕೊಂಡಿರುವ ACE2 ಗ್ರಾಹಕಗಳು ಒಮ್ಮೆ ಕೋವಿಡ್ ಸೋಂಕು ಹೊಂದಿದ್ದ ವ್ಯಕ್ತಿ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿದ್ದಾನೆ. ಆದರೆ “SARS-CoV-2 ನ ನಿರಂತರ ಸೋಂಕಿನಿಂದಾಗಿ ಭವಿಷ್ಯದ ಹೃದಯ ವೈಫಲ್ಯದ ಅಪಾಯದಲ್ಲಿರುವವರು ಹೆಚ್ಚಾಗುವ ನಿರೀಕ್ಷೆಯಿದೆ” ಎಂದಿದೆ. ನಿರಂತರ ಸೋಂಕಿಗೆ ಒಳಗಾಗುವುದು ಹೃದಯದ ಕಾರ್ಯಧಕ್ಷತೆಗೆ ಅಪಾಯ ತಂದೊಡ್ಡುತ್ತಿದೆ. ಇದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ.
ಇತ್ತೀಚಿನ ಎಚ್ಚರಿಕೆಯು USನಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಲಕ್ಷಾಂತರ ಜನರು ರಜಾದಿನಗಳಲ್ಲಿ ಪ್ರಯಾಣಿಸಲು ಸಿದ್ಧರಾಗಿದ್ದಾರೆ. ವೇಗವಾಗಿ ಹರಡುವ JN.1 ರೂಪಾಂತರವು ರಾಷ್ಟ್ರವ್ಯಾಪಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.44ರಷ್ಟು ಪಾಲು ಹೊಂದಿದೆ. ಹೀಗಾಗಿ ಈ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾ ವೈರಸ್ ಸೋಂಕಿಗೆ ಒಳಗಾದ ಕೆಲವು ಜನರು ತಮ್ಮ ಹೃದಯದಲ್ಲಿ ನಿರಂತರ ವೈರಲ್ ಸೋಂಕನ್ನು ಹೊಂದಿರಬಹುದು. ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೃದಯ ವೈಫಲ್ಯದ ಸಾಂಕ್ರಾಮಿಕಕ್ಕೆ ತಯಾರಿಗಾಗಿ ಪರೀಕ್ಷಾ ವ್ಯವಸ್ಥೆ ಮತ್ತು ಚಿಕಿತ್ಸಾ ವಿಧಾನಗಳನ್ನು ಸ್ಥಾಪಿಸಬೇಕು, ಇದರಲ್ಲಿ ಹೃದಯಾಘಾತ ರೋಗಿಗಳ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳವನ್ನು ನಾವು ನೋಡುತ್ತೇವೆ ಎಂದು ರಿಕನ್ ರಿಸರ್ಚ್ ಲೀಡರ್ ಹಿಡೆಟೋಶಿ ಮಸುಮೊಟೊ ಎಚ್ಚರಿಸಿದ್ದಾರೆ.
ಯುಎಸ್, ಯುಕೆ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ಇತ್ತೀಚಿನ ವಾರಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಸಾಕ್ಷಿಯಾದ ನಂತರ, ಹೊಸ ಸ್ಟ್ರೈನ್ ಜೆಎನ್.1 ರ ಹರಡುವಿಕೆ ಹೆಚ್ಚಾದ ಬಳಿಕ ಆರೋಗ್ಯ ತಜ್ಞರು ಇದು ಸಂಭಾವ್ಯ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಜಪಾನ್‌ನ ಉನ್ನತ ಸಂಸ್ಥೆಯಾದ ರಿಕೆನ್‌ನ ಸಂಶೋಧಕರು ವರದಿಯೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ, ಕೊರೊನಾ ವೈರಸ್ ಮಾನವ ಜೀವಕೋಶಗಳಿಗೆ ಅಂಟಿಕೊಂಡಿರುವ ACE2 ಗ್ರಾಹಕಗಳು. ಒಮ್ಮೆ ಕೋವಿಡ್‌ಗೆ ಒಳಗಾದವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯವಾಗಿ ಈ ವೈರಲ್ ಶ್ವಾಸಕೋಶಗಳ ಮೇಲೆ ದಾಳಿ ನಡೆಸಿದರೂ ಹೃದಯದ ಕಾರ್ಯ ಧಕ್ಷತೆಗೆ ಹೊಡೆತ ಬೀಳುತ್ತಿದೆ ಎಂದಿದ್ದಾರೆ.