ಬಿಹಾರ ರಾಜ್ಯದಲ್ಲಿ ವಿಲಕ್ಷಣ ಕೆಲಸ ನೀಡುವ ಏಜೆನ್ಸಿಯೊಂದು ಬೆಳಕಿಗೆ ಬಂದಿದೆ. ಯುವಕರಿಗೆ ಲಕ್ಷ ಲಕ್ಷ ರೂಪಾಯಿಗಳ ಆಸೆ ತೋರಿಸಿ ಮಹಿಳೆಯರನ್ನು ಗರ್ಭವತಿ ಮಾಡುವ ಕೆಲಸ ಕೊಡುತ್ತಿದೆ ಎಂದು ಮೋಸ ಮಾಡುವ ಜಾಬ್ ಲಿಂಕ್ಸ್ ಕಾರ್ಯಾಚರಿಯಿತ್ತಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಿಹಾರದ ನವಾಡದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೆಲಸದ ಅನಿವಾರ್ಯತೆಯಲ್ಲಿರುವ ಯುವಕರನ್ನು ಸಂಪರ್ಕಿಸಿ ಅವರಿಗೆ 13 ಲಕ್ಷ ನೀಡುವುದಾಗಿ ಆಸೆ ತೋರಿಸಿ, ಮಹಿಳೆಯರನ್ನು ಗರ್ಭವತಿ ಮಾಡುವ ಕೆಲಸ ಮಾಡಿಸುತ್ತಿತ್ತು ಈ ಗ್ಯಾಂಗ್. ‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಸರ್ವೀಸ್’ ಎಂಬ ಹೆಸರಿನಲ್ಲಿ ಇಂಥದ್ದೊಂದು ನೀಚ ಕಾರ್ಯ ನಡೆಯುತ್ತಿರುವುದು ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್‌ಗಳ ಮೂಲಕ ಯುವಕರನ್ನು ಸಂಪರ್ಕಿಸಿ ಕೆಲಸದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಆಸಕ್ತಿ ಇದ್ದವರು 799 ರೂಪಾಯಿ ಕೊಟ್ಟು ಈ ಜಾಬ್ ಲಿಂಕ್ಸ್ ನಲ್ಲಿ ನೋಂದಣಿ ಆಗುವಂತೆ ತಿಳಿಸುತ್ತಿತ್ತು . ಬಳಿಕ ಮಗುವಿನ ಅಗತ್ಯವಿರುವ ಹೆಂಗಸರ ಫೋಟೊ ತೋರಿಸಿ ಯಾರನ್ನು ಗರ್ಭವತಿ ಮಾಡಲು ಇಚ್ಛಿಸುತ್ತೀರಿ ಅವರ ಫೋಟೊ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗುತ್ತಿತ್ತು. ಜೊತೆಗೆ ಮಹಿಳೆಯರ ಬ್ಯೂಟಿ ಮೇರೆಗೆ 5 ರಿಂದ 20 ಸಾವಿರದ ವರೆಗೆ ಸೆಕ್ಯೂರಿಟಿ ಡಿಪಾಸಿಟ್ ಕೂಡ ಯುವಕರಿಂದ ಪಡೆಯಲಾಗುತ್ತಿತ್ತು. ಒಮ್ಮೆ ಯುವಕನಿಂದ ಮಹಿಳೆ ಗರ್ಭಧರಿಸಿದರೆ 13 ಲಕ್ಷ ರೂಪಾಯಿ ಪಕ್ಕಾ, ಒಮ್ಮೆ ಆಗದಿದ್ದರೆ 5 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತಿತ್ತು.
ಈ ಖತರ್ನಾಕ್ಲಗ್ಯಾಂಗ್ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಗ್ಯಾಂಗ್‌ನ ಮಾಸ್ಟರ್ ಮೈಂಡ್ ಮಾತ್ರ ತಲೆಮರೆಸಿಕೊಂಡಿದ್ದಾನೆ.