ಮಂಗಳೂರು : ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾಭಿಮಾನದ ಬದುಕಿಗಾಗಿ ರಾಜ್ಯದಲ್ಲೇ ಪ್ರಥಮ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಮಂಗಳೂರಿನಲ್ಲಿ ರಚನೆಯಾಗಿದೆ. ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ)ದ ನಿರ್ದೇಶಕ ಮಂಡಳಿ ಚುನಾವಣೆ ಇತ್ತೀಚೆಗೆ ನಡೆಯಿತು. 17 ಮಂದಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಕೆ ಇಮ್ತಿಯಾಝ್, ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮೊಹಮ್ಮದ್ ಮುಸ್ತಫಾ, ದಯಾನಂದ ಶೆಟ್ಟಿ, ಮೊಹಮ್ಮದ್ ಆಸೀಫ್, ಮೇರಿ ಡಿಸೋಜಾ, ಮೇಬಲ್ ಡಿಸೋಜಾ, ಪಿ.ಜಿ ಅಬ್ದುಲ್ ರಫೀಕ್ ಬೆಂಗರೆ, ಪ್ರವೀಣ್ ಕುಮಾರ್, ಅಬ್ದುಲ್ ರಹಿಮಾನ್, ಎಂ. ಕೆ ರಿಯಾಝ್, ಇಸ್ಮಾಯಿಲ್ ಉಳ್ಳಾಲ, ನೌಶಾದ್ ಉಳ್ಳಾಲ, ಶ್ರೀನಿವಾಸ್ ಕಾವೂರು, ಜಿತೇಂದ್ರ ಅತ್ತಾವರ, ಮೊಹಮ್ಮದ್ ತಂಜಿಲ್, ರೂಪೇಶ್ ನಾಯ್ಕ, ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಹಿರಿಯ ಅಧಿಕಾರಿ ವಿಲಾಸ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.