ಪುತ್ತೂರು: ಅಕ್ರಮ ಮಧ್ಯ ಮಾರಾಟ ಮಾಡಿದ್ದಾರ ಎನ್ನಲಾದ ಪ್ರಕರಣದ ಆರೋಪಿ ಆಶೋಕ್ ಸುವರ್ಣ ಎಂಬವರನ್ನು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿರುತ್ತದೆ.
ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ನ್ಯೂ ಜನತಾ ಕಾಲೋನಿಯಲ್ಲಿರುವ ಆಶೋಕ್ ಸುವರ್ಣ ಎಂಬವರಿಗೆ ಸೇರಿದ ಮನೆಯ ಒಳಗಡೆ ಅಡಿಗೆ ಕೋಣೆಯಲ್ಲಿ 2 ಗುಂಡಿಗಳನ್ನು ತೆಗೆದು ಅದರ ಒಳಗೆ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಇಟ್ಟು ಟೈಲ್ಸ್ ಮುಚ್ಚಿರುವುದನ್ನು ಹಾಗೂ ನೈಲಾನ್ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿ, ಸೊತ್ತುಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡ ಅಬಕಾರಿ ಪೊಲೀಸರು ಆಶೋಕ್ ಸುವರ್ಣರವರನ್ನು ಬಂಧಿಸಿ, ಅವರ ಮೇಲೆ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯವು ಈ ಪ್ರಕರಣವನ್ನು ಹಂತ ಹಂತವಾಗಿ ತನಿಖೆಗೆ ಕೈಗೆತ್ತಿಕೊಂಡು ಹಾಗೂ ಪ್ರೋಸಿಕ್ಯೂಷನ್ ಸಾಕ್ಷಿಗಳನ್ನು ತನಿಖೆ ನಡೆಸಿ,ಸರಿ ಸುಮಾರು 8 ದಾಖಲೆಗಳನ್ನು ಹಾಗೂ ಸುಮಾರು 27 ಮುದ್ದೆ ಮಾಲುಗಳನ್ನು ಪರಿಶೀಲಿಸಿ, ಪ್ರೋಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಭೀತುಪಡಿಸಲು ವಿಫಲವಾಗಿದೆ ಎಂದು ತೀರ್ಮಾನಿಸಿ, ಆರೋಪಿಯನ್ನು ನಿರಪರಾದಿಯೆಂದು ಬಿಡುಗಡೆಗೊಳಿಸಲು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧಿಶರಾದ ಶ್ರೀಯುತ ಶಿವಣ್ಣ ಹೆಚ್ ಆರ್ ರವರು ಆದೇಶಿಸಿರುತ್ತಾರೆ.
ಆರೋಪಿತರ ಪರವಾಗಿ ಹಿರಿಯ ವಕೀಲರು ‘ಕಜೆ ಲಾ ಚೇಂಬರ್ಸ್’ ಇದರ ಮುಖ್ಯಸ್ಥರೂ ಆದ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.