ಕುಪ್ಪೆಪದವು: ಬದ್ರಿಯಾ ಜುಮಾ ಮಸೀದಿಯ ಮತ್ತು ಮದೀನತ್ತುಲ್ ಉಲೂಂ ಮದರಸ ಕುಪ್ಪೆಪದವು ಇದರ ನೂತನ ಅಧ್ಯಕ್ಷರಾಗಿ ಮಹಮ್ಮದ್ ಶರೀಫ್ ಕಜೆ ಮತ್ತು ಕಾರ್ಯದರ್ಶಿಯಾಗಿ ಕೆ. ರಫೀಕ್ ಅಚಾರಿಜೋರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಅಧ್ಯಕ್ಷರು, ಹಿರಿಯರು ಆದ ಅಬ್ದುಲ್ ಲತೀಫ್ ಅಚಾರಿಚೋರ ಅವರ ಸಭಾಧ್ಯಕ್ಷತೆಯಲ್ಲಿ ದಿನಾಂಕ: 05-01-2024ರ ಶುಕ್ರವಾರ ಜುಮಾ ನಮಾಝಿನ ಬಳಿಕ ಮದೀನತ್ತುಲ್ ಉಲೂಂ ಮದರಸದ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಬದ್ರಿಯಾ ಜುಮಾ ಮಸೀದಿಯ ಇಮಾಮರಾದ ಬಹು॥ ಕೆ.ಎಚ್.ಯು ಶಾಫಿ ಮದನಿ ಕರಾಯ ರವರು ದುವಾ ನೆರವೇರಿಸಿ, ಮಸೀದಿಯ ಆಡಳಿತ ಮತ್ತು ಆಡಳಿತ ಸಮಿತಿಯ ಸದಸ್ಯರ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಮಸೀದಿ ಆಡಳಿತ ಕಮಿಟಿಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಮಹಮ್ಮದ್ ಶರೀಫ್ ಕಜೆ ಅವರನ್ನು ನೂತನ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಎನ್. ಅಬ್ದುಲ್ ಲತೀಫ್ ಆಚಾರಿಜೋರ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ರಫೀಕ್ ಅಚಾರಿಜೋರ, ಕೋಶಾಧಿಕಾರಿಯಾಗಿ ಎಂ.ಇಬ್ರಾಹಿಂ ಹಾಜಿ, ಜೊತೆ ಕಾರ್ಯದರ್ಶಿಯಾಗಿ ಮುಸ್ತಫ ಕಾಡಕೇರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಬದ್ರಿಯಾ, ಅಬ್ದುಲ್ ರಝಾಕ್ ಬ್ಲೂ ಸ್ಟಾರ್, ಮುಹಮ್ಮದ್ ಶರೀಫ್ ಪದವಿನಂಗಡಿ, ಸುಲೈಮಾನ್ ದರ್ಖಾಸ್, ಅಬ್ದುಲ್ ರಹಿಮಾನ್ ಮೂಸಾ, ಇಸ್ಮಾಯಿಲ್ ಶರೀಫ್, ಅಬ್ದುಲ್ ರಝಾಕ್ ಮಾಣಿಪಲ್ಲ, ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಮುಸ್ತಫ ಪದ್ರೆಂಗಿ, ಹುಸೈನ್ ಹಳೆನೀರು, ಶರೀಫ್ ಆಚಾರಿಜೋರ ಇವರುಗಳು ಆಯ್ಕೆಯಾದರು. ಇಸ್ಮಾಯಿಲ್ ಶರೀಫ್ ರವರು ಸ್ವಾಗತಿಸಿ, ನೂತನ ಕಾರ್ಯದರ್ಶಿ ಕೆ.ರಫೀಕ್ ಅಚಾರಿಜೋರ ವಂದಿಸಿದರು.