ಗೃಹಲಕ್ಷ್ಮೀ ಯೋಜನೆಯ 5ನೇ ಕಂತಿನ ಹಣ ಬಿಡುಗಡೆಗೆ ಮೊದಲೇ ರಾಜ್ಯ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಸರಕಾರ ಜಾರಿಗೆ ತಂದಿರುವ ರೂಲ್ಸ್ ಪಾಲನೆ ಮಾಡದೇ ಇದ್ದರೆ ಮುಂದಿನ ಯಾವುದೇ ಕಂತಿನ ಹಣವೂ ನಿಮ್ಮ ಖಾತೆಗೆ ಜಮೆ ಆಗೋದಿಲ್ಲ.
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಗೃಹಿಣಿಯರು ಕಡ್ಡಾಯವಾಗಿ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಲೇಬೇಕು. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬೇಕಾದರೆ ರೇಷನ್ ಕಾರ್ಡ್‌ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರು ಕೂಡ Ekyc ಮಾಡಿಸಲೇಬೇಕಾಗಿದೆ.
ಒಂದೊಮ್ಮೆ ನಿಮ್ಮ ಕುಟುಂಬ ಸದಸ್ಯರ ಇಕೆವೈಸಿ ಆಗಿದ್ದರೆ ನೀವು ಮತ್ತೆ ಇಕೆವೈಸಿ ಮಾಡಿಸುವ ಅಗತ್ಯವಿಲ್ಲ. ಒಂದೊಮ್ಮೆ ರೇಷನ್ ಕಾರ್ಡ್‌ನಲ್ಲಿ ಇರುವ ಸದಸ್ಯರ ಇಕೆವೈಸಿ ಆಗದೇ ಇದ್ದಲ್ಲಿ ಕೂಡಲೇ ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ ಇಕೆವೈಸಿ ಮಾಡಿಸಿಕೊಳ್ಳಬೇಕಾಗಿದೆ.