✍️. ನವೀನ್ ಸೂರಿಂಜೆ. ಪತ್ರಕರ್ತ
“ನಿನ್ನನ್ನು ಕೊಲ್ಲುವ ಕತ್ತಿಯನ್ನು ನೀನೇ ರೆಡಿ ಮಾಡಿ ಕೊಡ್ತಿದ್ದಿಯಲ್ವೇನೋ ಕಾಟೇರಾ ?” ಎಂದು ಕಮ್ಮಾರನಿಗೆ ಹೇಳುವ ಮಾತು ಈಗಿನ ಹಿಂದುತ್ವವಾದಿ ಹಿಂದುಳಿದ ವರ್ಗಗಳಿಗೆ ಹೇಳುವಂತಿದೆ.
“ಮೋದಿ ರಾಮನ ಮೂರ್ತಿ ಮುಟ್ಟುವುದೇ ? ಯಾರು ಎಷ್ಟೇ ದೊಡ್ಡ ಜನ ಆಗ್ಲಿ ಸನಾತನ ಶಾಸ್ತ್ರಗಳನ್ನು ಪಾಲಿಸಬೇಕು. ಮೋದಿಯವರ ಅತಿಯಾದ ಭಾಗಿಧಾರಿಕೆ, ಗರ್ಭಗುಡಿಯ ಸಾಮಿಪ್ಯವನ್ನು ನಾನು ವಿರೋಧಿಸುತ್ತೇನೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ” ಎಂದು ದೇಶದ ನಾಲ್ವರು ಪ್ರಮುಖ ಸ್ವಾಮೀಜಿಗಳು ಹೇಳಿಕೊಂಡಿದ್ದಾರೆ.
ಪುರೋಹಿತಶಾಹಿ ವ್ಯವಸ್ಥೆ ಎಲ್ಲರನ್ನೂ ಬಳಸಿ ಬಿಸಾಡುತ್ತೆ. ಅಂದು ಪಾರ್ಲಿಮೆಂಟ್ ಉದ್ಘಾಟನೆಯ ವೇಳೆ, ರಾಷ್ಟ್ರಪತಿಯವರನ್ನೇ ದೂರ ಇಡುವಂತೆ ಮೋದಿಗೆ ಸೂಚಿಸಿದ್ರು. ಮೋದಿ ಹಾಗೇ ಮಾಡಿದರು. ಈಗ ರಾಮಮಂದಿರದ ಗರ್ಭಗುಡಿ ಮತ್ತು ಮೂರ್ತಿಯಿಂದ ಮೋದಿಯೇ ದೂರ ಇರಬೇಕು ಎಂದು ಸನಾತನ ಧರ್ಮ ಬಯಸುತ್ತಿದೆ.
“ಸನಾತನ ಧರ್ಮ” ನಾಶವಾಗಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದಾಗ “ನಾನೂ ಸನಾತನಿ” ಎಂದು ಬರೆದುಕೊಂಡವರು ಈಗ ಸ್ವಾಮೀಜಿ ಹೇಳಿಕೆಯನ್ನು ಬೆಂಬಲಿಸಿ ಮೋದಿಯ ನಡೆಯನ್ನು ವಿರೋಧಿಸಬೇಕು.
ಬ್ರಾಹ್ಮಣ್ಯ, ಸನಾತನ ಧರ್ಮ, ಮನುವಾದ, ಹಿಂದುತ್ವವಾದ ಎನ್ನುವುದೇ ಹಾಗೆ. ಅದನ್ನು ಬೆಳೆಸಿದವರನ್ನೇ ಅದು ಅಪೋಶನ ತೆಗೆದುಕೊಳ್ಳುತ್ತದೆ.