ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಞಂಗಾಡ್ ಬಸ್ ನಿಲ್ದಾಣ ಪರಿಸರದ ಇಂಪ್ಯಾಕ್ಟ್ ಟ್ಯೂಶನ್ ಸೆಂಟರ್ ಮಾಲಕ ಡಿಫಿ ಮುಖಂಡನಾಗಿದ್ದ ಅತಿಯಾಂಬೂರಿನ ಬಾಬುರಾಜ್ ಪತ್ತೆಗಾಗಿ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ ನಡೆಸಿದರು. ಆದರೆ ಪತ್ತೆ ಸಾಧ್ಯವಾಗಿಲ್ಲ. ಈತನ ಟ್ಯೂಶನ್ ಸೆಂಟರ್‌ನ್ನು ಮುಚ್ಚಿ ಪೊಲೀಸರು ಮೊಹರು ಹಾಕಿದರು.
ಕಳೆದ ಮಂಗಳವಾರ ರಾತ್ರಿ ಟ್ಯೂಶನ್ ತರಗತಿಗೆಂದು ತಲುಪಿದ ವಿದ್ಯಾರ್ಥಿನಿಗೆ ಬಾಬುರಾಜ್ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಲಾಗಿದೆ. ಈ ಮೊದಲು ಕೂಡ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಬುರಾಜ್ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದ. ಬಾಬುರಾಜ್‌ನ ಪತ್ನಿಯ ಮನೆ ಮಂಗಳೂರಿನಲ್ಲಿದ್ದು, ಈ ಹಿನ್ನೆಲೆಯಲ್ಲಿ ಆತ ಅಲ್ಲಿ ತಲೆಮರೆಸಿಕೊಂಡಿರಬಹುದೆಂಬ ಶಂಕೆಯಲ್ಲಿ ಪೊಲೀಸರು ಪತ್ನಿಯ ಮನೆ ಹಾಗು ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.