ಕುಪ್ಪೆಪದವು: ಬದ್ರಿಯಾ ಜುಮಾ ಮಸೀದಿ ಮತ್ತು ಮದೀನತುಲ್ ಉಲೂಂ ಮದರಸ ಕುಪ್ಪೆಪದವು ಇದರ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಎಲ್. ಉಮರಬ್ಬರವರು ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು.
ಸರಳ,ಸಜ್ಜನಿಕೆ ಸ್ವಭಾವದವರಾದ ಎಲ್. ಉಮರಬ್ಬರವರು ಸರ್ವ ಧರ್ಮಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಕುಪ್ಪೆಪದವು ಜಮಾಅತ್ ನಲ್ಲಿ ನಡೆಯುವ ಎಲ್ಲಾ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕುಪ್ಪೆಪದವು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ, ಕುಪ್ಪೆಪದವು ಮದರಸ ಮೆನೇಜ್ ಮೆಂಟ್ ಇದರ ಅಧ್ಯಕ್ಷ, ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆಗೈದ ಮೃತರು ಮೂರು ಮಂದಿ ಪುತ್ರಿಯರನ್ನು, ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.
ಕುಪ್ಪೆಪದವು ಜುಮಾ ಮಸೀದಿಯ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೃತ ಎಲ್. ಉಮರಬ್ಬ ಅವರ ನಿಧನಕ್ಕೆ ಕುಪ್ಪೆಪದವು ಜುಮಾ ಮಸೀದಿಯ ಅಧ್ಯಕ್ಷರು, ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆದ ಮಹಮ್ಮದ್ ಶರೀಫ್ ಕಜೆ ಹಾಗೂ ಕುಪ್ಪೆಪದವು ಜುಮಾ ಮಸೀದಿ ಕಾರ್ಯದರ್ಶಿ ರಫೀಕ್ ಆಚಾರಿಜೋರ ಸಂತಾಪ ವ್ಯಕ್ತಪಡಿಸಿದ್ದಾರೆ.ದಫನ ಕಾರ್ಯವು ಅಸರ್ ನಮಾಝಿನ ಮೊದಲು ಕುಪ್ಪೆಪದವು ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿದೆ.