ಬಜ್ಪೆ: ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರಿಸಿಕೊಂಡಿದ್ದ ಖೋಟಾ ನೋಟು ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ವಿಟ್ಲದ ಕರೋಪಾಡಿ ಗ್ರಾಮದ ಮುಗೋಳಿ ನಿವಾಸಿ ಅಹಮ್ಮದ್ ಎಂಬವರ ಪುತ್ರ 36 ವರ್ಷದ ಫಾರೂಕ್ ಯಾನೆ ಫಾರೂಕ್ ಅಹಮ್ಮದ್ ಎಂಬಾತ ಬಂಧಿತ ಆರೋಪಿ. ಈತನಿಗೆ ಮಾನ್ಯ ನ್ಯಾಯಾಲಯವು ಖೋಟಾ ನೋಟು ಆರೋಪದಲ್ಲಿ ಐದು ವರ್ಷಗಳ ಸಜೆಯನ್ನು ವಿಧಿಸಿತ್ತು.
ಆರೋಪಿ ಫಾರೂಕ್ ಆಹಮ್ಮದ್ ನ್ಯಾಯಾಲಯದ ಕಣ್ಣು ತಪ್ಪಿಸಿ,ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದ. ಇಂದು ಬಜಪೆ ಪೊಲೀಸರು ಕಾಸರಗೋಡು ಜಿಲ್ಲೆಯ ಉಪ್ಪಳ ಮುಳಿಗುಡ್ಡೆ ಎಂಬಲ್ಲಿ ಮಹತ್ತರದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ ಮಂಗಳೂರು ಉತ್ತರ ಉಪ-ವಿಭಾಗದ ಎಸಿಪಿ ಮನೋಜ್ ಕುಮಾರ್, ಬಜಪೆ ಠಾಣಾ ವೃತ್ತ ನಿರೀಕ್ಷಕರಾದ ಸಂದೀಪ್ ಜಿ ಎಸ್ ರವರ ನೇತೃತ್ವದಲ್ಲಿ ಪಿಎಸ್ಐ ಗಳಾದ ಗುರಪ್ಪ ಕಾಂತಿ, ರೇವಣ್ಣ ಸಿದ್ದಪ್ಪ, ಎಎಸ್ಐ ರಾಮಪೂಜಾರಿ, ಹೆಚ್ ಸಿ ಜಗದೀಶ್, ಹೆಚ್ ಸಿ ಸುಜನ್, ಸಿಬ್ಬಂದಿಗಳಾದ ಬಸವರಾಜ್ ಪಾಟೀಲ್, ಕೆಂಚಪ್ಪ ರವರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.