ಶೋಯಬ್‌ ಮಲಿಕ್‌ ಮತ್ತು ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ಅನೈತಿಕ ಸಂಬಂಧಗಳೇ ಕಾರಣ

ರಾಷ್ಟ್ರೀಯ

ಪಾಕಿಸ್ತಾನದ ಶೋಯಬ್‌ ಮಲಿಕ್‌ ಮತ್ತು ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ತನ್ನ ಸೋದರ ಶೋಯಬ್‌ ಮಲಿಕ್‌ನ ಅನೈತಿಕ ಸಂಬಂಧಗಳಿಂದ ಸಾನಿಯಾ ಮಿರ್ಜಾ ಬೇಸತಿದ್ದಳು ಎಂದು ಶೋಯಬ್‌ ಮಲಿಕ್‌ ಸೋದರಿ ಆರೋಪಿಸಿದ್ದು, ಇದೇ ಇವರಿಬ್ಬರ ನಡುವೆ ವಿಚ್ಛೇದನಕ್ಕೆ ಕಾರಣವಾಗಿದೆ ಎಂದಿದ್ದಾಳೆ.

ಶೋಯಬ್‌ ಮಲಿಕ್‌ ಮತ್ತು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಳ್ಳಲು ಅನೈತಿಕ ಸಂಬಂಧಗಳೇ ಕಾರಣ ಎಂದು ಶೋಯಬ್‌ ಮಲಿಕ್‌ ಸೋದರಿ ಪ್ರತಿಕ್ರಿಯಿಸಿದ್ದಾಳೆ. ಶೋಯಬ್‌ ಮಲಿಕ್‌ ಇತ್ತೀಚಿಗಷ್ಟೇ ಪಾಕ್‌ ಸಿನಿಮಾ ನಟಿ ಸನಾ ಜಾವೇದ್‌ ರನ್ನು ವಿವಾಹವಾಗಿದ್ದರು. ಈ ಮದುವೆಗೆ ಶೋಯಬ್‌ ಕುಟುಂಬದ ಸದಸ್ಯರು ಯಾರೂ ಬಂದಿರಲಿಲ್ಲ .ಇದರಿಂದ ಕುಟುಂಬಸ್ಥರ ವಿರೋಧದ ನಡುವೆ ಶೋಯಬ್‌ ಮಲಿಕ್‌ ಮದುವೆಯಾಗಿದ್ದಾರೆಂಬ ಮಾತು ಕೇಳಿಬಂದಿತ್ತು.