ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ 10 ವರ್ಷಗಳ ಆಡಳಿತ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು, ಉದ್ದೇಶಪೂರ್ವಕವಾಗಿ ಭಾವನಾತ್ಮಕ ವಿಷಯಗಳನ್ನು ಕೆದಕುತ್ತಿದೆ. ಬಿಜೆಪಿಯ ಸುಳ್ಳು, ವಂಚನೆ, ತಪ್ಪುಗಳಿಗೆ ಪ್ರಬಲ ಉತ್ತರ ನೀಡಲು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಬೇಕು ಎಂದು ಇತ್ತೀಚೆಗೆ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು, ರಾಜ್ಯ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಜರಿದ್ದ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಕರೆ ನೀಡಿದ್ದಾರೆ.
2004ರಲ್ಲಿ ಭಿನ್ನಮತ ಬಿಟ್ಟು ಪಕ್ಷದ ಪ್ರತೀ ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ ಎದ್ದು ನಿಂತರು. ಪಕ್ಷವನ್ನು ಅಧಿಕಾರಕ್ಕೆ ತಂದರು. ಈಗ ಅದೇ ಅರ್ಪಣಾಭಾವದಿಂದ ಕಠಿಣ ಶ್ರಮ ಹಾಕಿದರೆ, ಪಕ್ಷ ಮುನ್ನಡೆಯುತ್ತದೆ. ಮೋದಿ ಸರ್ಕಾರ ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸಲು ಯತ್ನಿಸುತ್ತಿದೆ. ಸಂಸದೀಯ ಪ್ರಜಾಪ್ರಭುತ್ವ, ಆಧುನಿಕ ಭಾರತದ ನಿರ್ಮಾಣದಲ್ಲಿ ಕಾಂಗ್ರೆಸ್ ಪಾತ್ರವನ್ನು ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ’ ಎಂದು ಖರ್ಗೆ ಹೇಳಿದ್ದಾರೆ.
ಮತದಾರರ ಪಟ್ಟಿ ಇಟ್ಟುಕೊಂಡು ಬೇರುಮಟ್ಟದಿಂದ ಕಾರ್ಯಕರ್ತರು ಬುತ್ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಮುಖ್ಯವಾಗಿ ವಲಸಿಗರು, ದಲಿತರು, ಬುಡಕಟ್ಟು ಜನರು, ಇತರೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಮೇಲೆ ಮುಖ್ಯವಾಗಿ ಗಮನ ಹರಿಸಬೇಕು. ಎಲ್ಲ ಭಿನ್ನಮತಗಳನ್ನು ಪಕ್ಕಕ್ಕಿಟ್ಟು, ಕಾಲೆಳೆಯುವುದನ್ನು ನಿಲ್ಲಿಸಿ. ಆಂತರಿಕ ವಿವಾದಗಳನ್ನು ಮಾಧ್ಯಮಗಳಲ್ಲಿ ಚರ್ಚಿಸದೆ. ಕಾಂಗ್ರೆಸ್ ಜಯಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಮಗಿರುವುದು ಇನ್ನು ಮೂರೇ ತಿಂಗಳು ಸಮಯ. ಹಗಲು-ರಾತ್ರಿ ದುಡಿದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಪರ್ಯಾಯ ಸರ್ಕಾರವೊಂದನ್ನು ಅಧಿಕಾರಕ್ಕೆ ತರಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024ರಲ್ಲಿ ಮೋದಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರಲು ಹವಣಿಸ್ತಿರೋ ಕಾಂಗ್ರೆಸ್ ಪಾರ್ಟಿ ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಹೊಸ ರಣತಂತ್ರಗಳನ್ನು ಹೆಣೆಯೋಕೆ ಮುಂದಾಗಿದೆ. ಇದರ ಭಾಗವಾಗಿ ಆಯಾ ರಾಜ್ಯಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಜ್ಯಗಳ ಬೂತ್ ಲೆವಲ್‌ನಿಂದ, ಕೈ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕರ್ತರಿಗೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೊಸ ಹುಮ್ಮಸ್ಸು ತುಂಬುಲಿದ್ದಾರಂತೆ. ಈ ಬಗ್ಗೆ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೊ ತೆಲಂಗಾಣದಿಂದ ಜನವರಿ 25ರಂದು ಈ ಸಮಾವೇಶ ಆರಂಭಿಸಲಾಗುತ್ತದೆ ಅಂತ ಹೇಳಿದ್ದಾರೆ. ಅಲ್ಲದೇ ಜನವರಿ 28ಕ್ಕೆ ಉತ್ತರಾಖಂಡ, 29ಕ್ಕೆ ಒಡಿಶಾ, ಫೆಬ್ರುವರಿ 3 ರಂದು ದೆಹಲಿ, 4ಕ್ಕೆ ಕೇರಳ, 10ಕ್ಕೆ ಹಿಮಾಚಲ ಪ್ರದೇಶಗಳಲ್ಲಿ ಸಮಾವೇಶ ನಡೆಯಲಿದೆ. ಫೆಬ್ರುವರಿ 11ಕ್ಕೆ ಪಂಜಾಬ್, 13ಕ್ಕೆ ತಮಿಳುನಾಡು, 15ಕ್ಕೆ ಜಾರ್ಖಂಡ್‌ನಲ್ಲಿ ಸಮಾವೇಶ ಫಿಕ್ಸ್ ಮಾಡಲಾಗಿದೆ ಎಂದು ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
ಕಾಂಗ್ರೆಸ್ 1969ರಲ್ಲಿ ಒಡೆದು ಎರಡು ಹೋಳಾಗಿತ್ತು. ಆನಂತರ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಗೆ ನಿರಾಶೆಯುಂಟು ಮಾಡಿದೆ ಎಂದು ಸಂದರ್ಶನವೊಂದರಲ್ಲಿ ಇಂದಿರಾ ಗಾಂಧಿಯವರು ಈ ನಿರಾಶೆಯನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಶನವನ್ನು ಉಮಾ ವಾಸುದೇವ್ ಅವರು ರಚಿಸಿರುವ ಇಂದಿರಾ ಗಾಂಧಿಯವರ ಜೀವನಚರಿತ್ರೆ ಪುಸ್ತಕದ ಕೊನೆಯ ಅಧ್ಯಾಯವಾಗಿ
ಪ್ರಕಟಿಸಲಾಗಿದೆ. ಕಾಂಗ್ರೆಸ್ ಪಕ್ಷ ಇನ್ನೂ ಸತ್ವರಹಿತವಾಗಿಯೇ ಕಾರ್ಯನಿರ್ವಹಿಸುತ್ತಿದೆ, ಅದರ ಜಡತ್ವ ಇನ್ನೂ ಹೋಗಿಲ್ಲ.!