ರಾಜ್ಯದ ವಿವಿಧ ಬಗೆಯ ಟ್ಯಾಕ್ಸಿಗಳಿಗೆ ಏಕ ರೂಪ ಪ್ರಯಾಣ ದರ ನಿಗದಿಗೊಳಸಿ ಆದೇಶ ಮಾಡಿದ ಸರಕಾರ

ರಾಜ್ಯ

ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್ ನಿಯಮದಡಿ ಕಾರ್ಯನಿರ್ವಹಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಬೆಂಗಳೂರು ಸೇರಿ ರಾಜ್ಯದಲ್ಲಿ ಓಡಾಡುವ ಎಲ್ಲಾ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಇನ್ನಿತರೆ ಟ್ಯಾಕ್ಸಿಗಳ ಹಾಗೂ ಅಗ್ರಿಗೇಟರ್ಸ್ ನಿಯಮಗಳಡಿ ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕೆಗೆ ಏಕರೂಪ ದರ ನಿಗದಿ ಪಡಿಸಲಾಗಿದೆ. ಕೂಡಲೇ ಜಾರಿಗೆ ಬರುವಂತೆ ನಿಗದಿಪಡಿಸಲು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ.

ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೆಲ ವೇಳೆ ದುಬಾರಿ ದರ ವಿಧಿಸುತ್ತಿದ್ದರು. ಅದರಲ್ಲೂ ಪೀಕ್ ಅವಧಿಯಲ್ಲಿ ಟ್ಯಾಕ್ಸಿ ದರ ದುಪ್ಪಟ್ಟಾಗುತಿತ್ತು. ಹೀಗಾಗಿ ವಿವಿಧ ಟ್ಯಾಕ್ಸಿಗಳಿಗೆ ಒಂದೇ ಮಾದರಿ ದರ ನಿಗದಿ ಮಾಡುವಂತೆ ಪ್ರಯಾಣಿಕರಿಂದ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಇದೀಗ ಸರ್ಕಾರ ಏಕ ರೂಪ ದರ ನಿಗದಿಗೊಳಸಿ ಆದೇಶ ಹೊರಡಿಸಿದೆ.