ಸಂಬಂಧಿ ಮಹಿಳೆಯನ್ನು ಹತ್ಯೆ ಮಾಡಿ, ಶವದೊಂದಿಗೆ ಸಂಬೋಗ; ಅಪ್ರಾಪ್ತ ಬಾಲಕ ಸೇರಿ ಇಬ್ಬರ ಬಂಧನ

ರಾಜ್ಯ

ತನ್ನದೇ ಸಂಬಂಧಿ ಮಹಿಳೆಯನ್ನು ಹತ್ಯೆ ಮಾಡಿ ನಂತರ ಅ ಶವದೊಂದಿಗೆ ಸಂಬೋಗ ನಡೆಸಿದ ಆರೋಪದ ಮೇಲೆ ಛತ್ತೀಸ್‍ಗಢದ ಬಲರಾಮ್‍ಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‍ಪುರ ಠಾಣೆ ವ್ಯಾಪ್ತಿಯ ಪರಸಗುಡಿ ಹರಿತ್ಮಾ ಗ್ರಾಮದ ಕಾಡಿನಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

17 ವರ್ಷ ವಯಸ್ಸಿನ ಅಪ್ರಾಪ್ತ ಮಹಿಳೆಯ ಪತಿಯ ಸಹೋದರನಾಗಿದ್ದು, ಮತ್ತೊಬ್ಬ ಆರೋಪಿ ಸಂತ್ರಸ್ತೆಯ ಸಂಬಂಧಿ ಎಂದು ಗುರುತಿಸಲಾಗಿದೆ. ಮಹಿಳೆ ಮತ್ತು ಆಕೆಯ ಪತಿ ಕೆಲಸದ ನಿಮಿತ್ತ ಪರ್ಸಗುಡಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಸುರ್ಗುಜಾ ಜಿಲ್ಲೆಯ ಅಕೋಲಾಕ್ಕೆ ಸ್ಥಳಾಂತರಗೊಂಡಿದ್ದರು. ಘಟನೆಯ ದಿನ ಆರೋಪಿಗಳು ತಮ್ಮ ಕೃಷಿ ಭೂಮಿಗೆ ನೀರುಣಿಸಲು ಹರಿತ್ಮಾ ಅರಣ್ಯಕ್ಕೆ ಬರುವಂತೆ ಫೋನ್ ಮೂಲಕ ಮಹಿಳೆಯನ್ನು ಕರೆದಿದ್ದರು.

ಕಾಡಿಗೆ ಬಂದ ಮಹಿಳೆಯೊಂದಿಗೆ ಮದ್ಯ ಸೇವಿಸಿದ ನಂತರ ಅಪ್ರಾಪ್ತ ಬಾಲಕ ನೈಲಾನ್ ಹಗ್ಗದಿಂದ ಆಕೆಯ ಕತ್ತು ಹಿಸುಕಿ ಕೊಂದು ನಂತರ ಇಬ್ಬರು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಪರಾರಿಯಾಗಿದ್ದರು. ದಾರಿಹೋಕರು ಆಕೆಯ ಶವವನ್ನು ಕಂಡುಕೊಂಡು ಪೊಲೀಸರಿಗೆ ತಿಳಿಸಿದ್ದರು.

ತನಿಖೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರು ಮಹಿಳೆಯನ್ನು ಕೊಲೆ ಮಾಡಿ ನಂತರ ಶವ ಸಂಭೋಗ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮೂಲಗಳಿಂದ ತಿಳಿದು ಬಂದಿದೆ.