ಜೈಲಿನಲ್ಲಿ 15 ಮಂದಿ ಗರ್ಭಿಣಿಯರು; 196 ಮಕ್ಕಳಿಗೆ ಜನ್ಮ ಆಘಾತಕಾರಿ ಅಂಶ ಬಿಚ್ಚಿಟ್ಟ ವಕೀಲರು.!

ರಾಷ್ಟ್ರೀಯ

ಕೊಲ್ಕತ್ತಾದ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿರುವ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಜೈಲಿನಲ್ಲಿದ್ದಾಗ ಕೈದಿಗಳು ಗರ್ಭಿಣಿಯರಾದ ಬಗ್ಗೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಪಿಐಎಲ್ ಅರ್ಜಿ ವಿಚಾರಣೆಯಲ್ಲಿ ವಾದ ಮಂಡಿಸಿದ ವಕೀಲರು, ನಾನು ಇತ್ತೀಚೆಗೆ ಒಂದು ಜೈಲಿಗೆ ಭೇಟಿ ನೀಡಿದ್ದೆ. ಜೈಲಿನಲ್ಲಿ 15 ಮಂದಿ ಗರ್ಭಿಣಿಯರು ಇದ್ದರು. ಜೈಲಿನಲ್ಲಿ ಇದುವರೆಗೆ 196 ಮಕ್ಕಳು ಹುಟ್ಟಿವೆ ಅನ್ನೋ ಆಘಾತಕಾರಿ ಅಂಶ ಬಿಚ್ಚಿಟ್ಟಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ನಮ್ಮ ಗಮನಕ್ಕೆ ತಂದಿರುವ ಈ ವಿಷಯ ಬಹಳ ಗಂಭೀರವಾದದ್ದು. ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ. ಹೀಗಾಗಿ ಸುಧಾರಣಾ ಗೃಹಗಳಿಗೆ ಪುರುಷ ಉದ್ಯೋಗಿಗಳ ಪ್ರವೇಶ ಸಂಪೂರ್ಣ ನಿಷೇಧಿಸಿ ಆದೇಶ ನೀಡಿದೆ.