ಕೋಟಿ ಚೆನ್ನಯ್ಯ, ನಾರಾಯಣ ಗುರುಗಳಂತಹ ವಿಚಾರಧಾರೆ, ಆಶಯಗಳನ್ನು ಮುನ್ನಡೆಸುತ್ತಿದೆ ಡಿವೈಎಫ್ಐ – ಮುನೀರ್ ಕಾಟಿಪಳ್ಳ

ಕರಾವಳಿ

ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆದುರಾಗಿ ಜಾತ್ಯಾತೀತ ಯುವ ಮನಸ್ಸುಗಳನ್ನು ಸಂಘಟಿಸಿ ನಿರಂತರ ಹೋರಾಡುತ್ತಿರುವ ದೇಶಪ್ರೇಮಿ ಯುವಜನ ಸಂಘಟನೆ ಡಿವೈಎಫ್ಐ‌ ನಮ್ಮನ್ನಾಳುವ ಸರಕಾರಗಳ ತಪ್ಪಾದ ನೀತಿಗಳು, ಮತೀಯ ರಾಜಕಾರಣಕ್ಕೆ ಬಲಿಯಾಗುತ್ತಿರುವ ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ, ದಲಿತರ ಮತ್ತು ಜನಸಮಾನ್ಯರ ಮೇಲಾಗುವ ಅನ್ಯಾಯಕ್ಕೆದುರಾಗಿ ಈ ಹಿಂದೆ ತುಳುನಾಡಿನ ಮಣ್ಣಿನಲ್ಲಿ ಗರಡಿಗಳ ಮೂಲಕ ಜನರನ್ನು ಸಂಘಟಿಸಿ ಭೂಮಿ ಹೋರಾಟ ನಡೆಸಿದ ಅವಳಿ ವೀರರಾದ ಕೋಟಿಚೆನ್ನಯ್ಯರಂತಹ, ಒಂದೇ ಜಾತಿ ಒಂದೇ ಮತ ಸಾರಿದ ನಾರಾಯಣಗುರುಗಳಂತಹ ವಿಚಾರಧಾರೆಯಡಿಯಲ್ಲಿ ಬಲಿಷ್ಠ ಚಳುವಳಿಯನ್ನು ಕಟ್ಟಲು ಡಿವೈಎಫ್ಐ ಸಂಘಟನೆ ಮುನ್ನಡೆಯುತ್ತಿದೆ ಎಂದು ಡಿವೈಎಫ್ಐ ನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಯುಕ್ತ ಜಿಲ್ಲಾಧ್ಯಂತ ಕರೆ ನೀಡಿದ ಧ್ವಜ ದಿನ ನಿಟ್ಟಿನಲ್ಲಿ ಇಂದು(11-2-24) ಸುರತ್ಕಲ್ ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಡಿವೈಎಫ್ಐ‌ ಕರ್ನಾಟಕ ರಾಜ್ಯ ಸಮ್ಮೇಳನವು ಈ ಬಾರಿ‌ ದಕ್ಷಿಣ ಜಿಲ್ಲೆಯಲ್ಲಿ ಸಂಘಟಿಸಿದ್ದು ಈ ಸಮ್ಮೇಳನವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ನಾಗಮೋಹನ್ ದಾಸ್ ಉದ್ಘಾಟಿಸಲಿರುವರು. ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಎ.ಎ ರಹೀಮ್ ಉಪಸ್ಥಿತಲಿರುವರು. ಬಹಿರಂಗ ಸಭೆಯಲ್ಲಿ ಸಿಪಿಐಎಂ ನ ಪ್ರಧಾನ ಕಾರ್ಯದರ್ಶಿ ಸೀತರಾಮ ಯೆಚೂರಿ, ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಭಾಗವಹಿಸಲಿರುವರು. ಪ್ರತಿನಿಧಿ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಯುವಜನರ ಮುಂದಿರುವ ಸವಾಲುಗಳ ಬಗ್ಗೆ , ಮತೀಯ ರಾಜಕಾರಣಕ್ಕೆ ಬಲಿಯಾಗಿ ಘನತೆಯ ಬದುಕು ಕಳೆದುಕೊಳ್ಳುತ್ತಿರುವ ನಿರುದ್ಯೋಗಿ ಯುವಜನರ ಬಗ್ಗೆ ಈ ಸಮ್ಮೇಳನವು ಗಂಭೀರವಾದ ಚರ್ಚೆಗಳನ್ನು ನಡೆಸಲಿರುವುದು ಮತ್ತು ಮುಂದಿನ ದಿನಗಳಲ್ಲಿ ಅವುಗಳ ವಿರುದ್ಧ ಪ್ರಭಲ ಚಳುವಳಿಗಳನ್ನು ಕಟ್ಟಲು ಮಾರ್ಗೋಪಾಯಗಳನ್ನು ರೂಪಿಸಲಿರುವುದು. ಯುವಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ವಿರುದ್ಧ ನಾಡಿನಲ್ಲಿ ಸಾಮರಸ್ಯ, ಉದ್ಯೋಗ, ಘನತೆಯ ಬದುಕುಗಾಗಿ ಈ ತುಳುನಾಡಿನ ಮಣ್ಣಿನ ವೀರ ಪುರುಷರಾದ ಕೋಟಿ ಚೆನಯ್ಯರಂತಹ, ಮಾನವೀಯತೆಯನ್ನು ಸಾರಿದ ನಾರಾಯಣ ಗುರುಗಳಂತವರ ವಿಚಾರಧಾರೆಗಳು ನಮ್ಮ ಡಿವೈಎಫ್ಐ ಸಂಘಟನೆಯ ಚಳುವಳಿಗೆ ಎಂದಿಗೂ ಆದರ್ಶವಾಗಿ ಇರುವರು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ನಡೆದ ಧ್ವಜ ದಿನ ಕಾರ್ಯಕ್ರಮದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ರಜಾಕ್ ಮೊಂಟೆಪದವು, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ವಿನುಶರಮಣ ಬೆಳ್ತಂಗಡಿ, ರಿಯಾಜ್ ಮೂಡಬಿದ್ರೆ, ಮಹಾಬಲ ಟಿ ದೆಪ್ಪೆಲಿಮಾರ್, ರಜಾಕ್ ಮುಡಿಪು, ಮಾದುರಿ ಬೋಳಾರ, ಅದಿತಿ ಬೆಳ್ತಂಗಡಿ, ರಫೀಕ್ ಹರೇಕಳ, ರಾಜೇಶ್ ಉರ್ವಸ್ಟೋರ್, ಮನೋಜ್ ಕುಲಾಲ್, ದೀಪಕ್ ಬಜಾಲ್, ಧಿರಾಜ್ ಬಜಾಲ್, ನೌಶದ್ ಬೆಂಗರೆ, ಹನೀಫ್ ಬೆಂಗರೆ, ದಿನೇಶ್ ವಾಮಂಜೂರು, ಅಮೀರ್ ಉಳ್ಳಾಲ, ಭರತ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.