ಮಾಜಿ ಮುಖ್ಯ ಮಂತ್ರಿ ಕಮಲ್ ನಾಥ್ ಆಪ್ತರೊಂದಿಗೆ ಕಮಲ ಮುಡಿಯಲು ಸನ್ನದ್ಧ; ಕಾಂಗ್ರೆಸ್ ಪಾಲಿಗೆ ಮತ್ತೊಂದು ಮರ್ಮಾಘಾತ.!

ರಾಷ್ಟ್ರೀಯ

ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಸತತವಾಗಿ ಹಿನ್ನಡೆ ಅನುಭವಿಸುತ್ತಾ ಬರುತ್ತಿದ್ದು, ಈಗ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಮತ್ತು ಅವರ ಆಪ್ತ ರಾಜ್ಯ ಸಭಾ ಸದಸ್ಯ ವಿವೇಕ್ ತಂಖಾ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ‌ ಎನ್ನಲಾಗುತ್ತಿದ್ದು, ಈ ಬಗ್ಗೆ ಬಾರಿ ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ. ಕಮಲನಾಥ್ ಅವರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ, ಪುತ್ರನಿಗೆ ಲೋಕಸಭಾ ಟಿಕೆಟ್ ಹಾಗೂ ತಂಖಾ ಅವರನ್ನು ಬಿಜೆಪಿ ಲೋಕ ಅಖಾಡಕ್ಕೆ ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಆಘಾತ ಕೊಡುವಂತಹ ವಿದ್ಯಮಾನಗಳು ಬ್ರೇಕ್ ಇಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿವೆ. ಮೋದಿ ಎದುರಿಸಲು ರಚನೆಯಾದ ಐ ಎನ್ ಡಿ ಐ ಎ ಕೂಟವೂ ದಿನದಿಂದ ದಿನಕ್ಕೆ ಅಘಾತಕ್ಕೊಳಗಾಗುತ್ತಿದೆ. ಈಗ ಮತ್ತೊಬ್ಬ ಪ್ರಮುಖ ನಾಯಕ ತನ್ನ ಆಪ್ತರೊಂದಿಗೆ ಕಮಲ ಮುಡಿಯಲು ಸನ್ನದ್ಧರಾಗಿದ್ದು, ಇದು ಕಾಂಗ್ರೆಸ್ ಪಾಲಿಗೆ ಮತ್ತೊಂದು ಮರ್ಮಾಘಾತ ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ.