ದಲಿತರ ಭೂ ದಾಖಲೆಗಳ ನಾಶ, ಅಕ್ರಮ ಒತ್ತುವರಿ ತೆರವು ಆಗ್ರಹಿಸಿ, ಭೂ ಸಂಘರ್ಷ ಸಮಿತಿ ವತಿಯಿಂದ ಪೆ. 22,23 ರಂದು ಅಹೋರಾತ್ರಿ ಧರಣಿ: ಸಂಚಾಲಕ ಬಿ.ರುದ್ರಯ್ಯ

ರಾಜ್ಯ

ಮೂಡಿಗೆರೆ : ದಲಿತರ ಭೂ ಮಂಜೂರಾತಿ ದಾಖಲೆಗಳನ್ನು ನಾಶಪಡಿಸಿರುವುದರ ಬಗ್ಗೆ ತನಿಖೆ ಆಗುವಂತೆ, ದಲಿತರ ಮಂಜೂರಾತಿ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಜನಪ್ರತಿನಿದಿಗಳು ಹಾಗೂ ಆಡಳಿತ ನಿರ್ಲಕ್ಷವಹಿಸಿದ್ದು ಮತ್ತು ಹತ್ತು ಹಲವಾರು ಹಕ್ಕೋತ್ತಾಯಗಳನ್ನು ಒತ್ತಾಯಿಸಿ ಭೂ ಸಂಘರ್ಷ ಸಮಿತಿವತಿಯಿಂದ ಪೆ.22,23ರಂದು ಅಹೋರಾತ್ರಿ ಧರಣಿ ನಡೆಸುವುದಾಗಿ ಸಮಿತಿಯ ಸಂಚಾಲಕ ಬಿ.ರುದ್ರಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು. ಡಾ.ಬಿ.ಆರ್ ಅಂಬೇಡ್ಕರ್‌ರವರ ಪ್ರಕಾರ ಭೂಮಿಯನ್ನು ರಾಷ್ಟ್ರೀಕರಿಸಿ ಉಳುವವರಿಗೆ ಊಳಬಹುದಾದ ಭೂಮಿಯನ್ನು ನೀಡಬೇಕು ಎಂಬ ಆಶಯದಂತೆ ರೈತ ಬಂಡಾಯಗಳು, ದಲಿತ ಚಳುವಳಿ, ಆದಿವಾಸಿ ಚಳುವಳಿ, ಎಡ ಕ್ರಾಂತಿಕಾರಿ ಶಕ್ತಿಗಳು ಭೂಮಿಯ ಪ್ರಶ್ನೆಯನ್ನು ಪ್ರಧಾನವಾಗಿಸಿದ್ದರಿಂದ ನಿಲ್ಲದ ಭೂಮಿಗಾಗಿಯ ದನಿಯನ್ನು ಅಡಗಿಸಲು ಭೂಸುಧಾರಣಾ ಕಾಯ್ದೆಗಳು ಜಾರಿಗೆ ತರಲು ಸರ್ಕಾರಗಳು ಪ್ರಾರಂಬಿಸುತ್ತವೆ.

ಇನಾಂ ರದ್ದತಿ ಕಾಯ್ದೆ-1955, ಭೂ ಸುಧಾರಣಾ ಕಾಯ್ದೆ-1961 ಭೂ ಸುಧಾರಣಾ ಕಾಯ್ದೆ-1974 ರಂತಹ ಸುಧಾರಣಾತ್ಮಕ ಕಾಯ್ದೆ ಮೂಲಕ ಒಂದಷ್ಟು ಭೂಮಿ ಸಿಕ್ಕಿದ್ದು ಮುಖ್ಯ ವಿಚಾರ. ಆದರೆ 1974 ರ ಭೂಸುದಾರಣಾ ಕಾಯ್ದೆ ಭೂಮಿತಿ ಕಾಯ್ದೆಯನ್ನು ಮಾರ್ಪಡಿಸಿ ನೀರಾವರಿಯಾದರೆ 20 ಎಕರೆ ಬೆದ್ದಲಾದರೆ(ಸಿ.ಅಂಡ್.ಡಿ) 40ಎಕರೆ ಎಂದು ನಿಗದಿಗೊಳಿಸಿತ್ತು. ಹಾಗೂ ಹೆಚ್ಚುವರಿಯನ್ನು ಮುಟ್ಟುಗೊಲು ಹಾಕಿ ಅದರಲ್ಲಿ ಶೇ 50 ರಷ್ಟು ಭೂಮಿ ದಲಿತರಿಗೆ ಹಾಗೂ ಆದಿವಾಸಿಗಳಿಗೆ ಎಂದು ಒತ್ತಿ ಹೇಳಿತ್ತು. ಆದರೆ ಕರ್ನಾಟಕ ಸೇರಿದಂತೆ ದೇಶದಲ್ಲಿ ಹಂಚಿಕೆಯಾಗಿರುವ ಭೂಮಿಯ ಪ್ರಮಾಣ 49.9 ಲಕ್ಷ ಎಕರೆ. ಇದು ಒಟ್ಟು ಭೂಮಿಯ ಶೇಕಡಾ 2 ರಷ್ಟು ಮಾತ್ರ. ಸಾರಾಂಶದಲ್ಲಿ ಕಾಯ್ದೆಗಳ ಗುರಿ ಉದ್ದೇಶ ಈಡೇರದೆ ದಲಿತರಿಗೆ ಹೆಚ್ಚೇನು ಸಿಗಲಿಲ್ಲ. ಈಗಾಗಿಯೇ ಇಂದಿಗೂ ದಲಿತರ, ಆದಿವಾಸಿಗಳ ಆಸ್ತಿ ಎಂದರೆ ಅವರ ಕೈ ಮತ್ತು ಕಾಲು ಎಂಬಂತಾಗಿದೆ.

ರಾಜಕೀಯವಾಗಿ ಮೀಸಲು ಕ್ಷೇತ್ರ ಇಲ್ಲಿನ ಮತದಾರರಲ್ಲಿ ಸಿಂಹಪಾಲು ದಲಿತರೇ ಆಗಿದ್ದಾರೆ. ಜನಸಂಖ್ಯೆಯಲ್ಲಿ, ದುಡಿಮೆಯಲ್ಲಿ, ಬಡತನದಲ್ಲಿ, ನಿವೇಶನ ಮತ್ತು ಸ್ಮಶಾನದಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಭೂ ಹೀನರಲ್ಲಿ ಬಹುಪಾಲು ಇದೇ ಸಮುದಾಯವಾಗಿದೆ. ಆದರೆ ಇಲ್ಲಿ ಗೋಮಾಳ, ಗೈರಾಣ, ಊರು ಉಡುಬೆ, ಗ್ರಾಮಠಾಣಾ, ಕೆರೆ ಅಂಗಳ, ಹುಲ್ಲುಬನ್ನಿ, ಕಾಫಿ ಖರಾಬು, ಕುರಿಮಂದೆ, ನೆಡುತೋಪುನಂತಹ ಸಾವಿರಾರು ಎಕರೆ ಭೂಮಿ ಇದ್ದರೂ ಶೇಕಡಾ 99 ರಷ್ಟು ಜನರು ಭೂಹೀನಾ ಬಡವರಾಗಿದ್ದಾರೆ, ಹಾಗಾದರೆ ಇಂತಹ ಭೂಮಿಗಳನ್ನು ಮೇಯ್ದು ನೀರು ಕುಡಿದವರಾರು.? ಇರುವ ತುಂಡು ಭೂಮಿಯು ಬಲಾಡ್ಯರಿಂದ ಒತ್ತುವರಿಯಾಗಿದೆ ಇಲ್ಲವೇ ಸಹಕಾರಿ ಬ್ಯಾಂಕ್‌ಗಳ ಮೂಲಕ ಹರಾಜಾಗಿದೆ. ಮಂಜೂರಾತಿಯಾದ ಭೂಮಿ ದುರಸ್ಥಿ ಕಾಣದೆ ದಾಖಲಾತಿಗಳು ನಾಪತ್ತೆಯಾಗಿವೆ.

ಒಟ್ಟಾರೆ ದಲಿತರ ಕೈಯೊಳಗಿನ ಭೂಮಿ, ಮಕ್ಕಳ ಕೈಯಲ್ಲಿನ ರೊಟ್ಟಿಯನ್ನು ನಾಯಿ ಕಿತ್ತಂತಾಗಿದೆ ಹಾಗೂ ಇಡೀ ರಾಜ್ಯವೇ ನಾಚುವಂತಹ 649 ಅಕ್ರಮ ಭೂ ಮಂಜೂರಾತಿ ಖಾತೆಯ ಸಾವಿರಾರು ಎಕರೆ ಭೂಮಿಯು ಉಳ್ಳವರ ಪಾಲಾಗಿ ಮೀಸಲು ಕ್ಷೇತ್ರದ ರಾಜಕೀಯವನ್ನೇ ಪ್ರಶ್ನೆ ಮಾಡುವಂತಹದ್ದಾಗಿದ್ದರು, ಮತ್ತೆ ಸಾವಿರಾರು ಎಕರೆ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ತೀರ್ಮಾನ ಉಂಡವರಿಗೆ ಊಟ ನೀಡಿದಂತಾಗಿದ್ದರು ಮೀಸಲು ಕ್ಷೇತ್ರದ
ಜನಪ್ರತಿನಿಧಿಗಳ ಬಾಯಿ ಬಂದ್ ಆಗಿದೆ. ಇಂತಹವರನ್ನು ದಲ್ಲಾಳಿಗಳು ಎಂದರೆ ತಪ್ಪೇ.? ಎಂದ ಅವರು ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಧರಣ ನಡೆಸುವುದಾಗಿ ತಿಳಿಸಿದ್ದಾರೆ.