ವಿಷ್ಣುವರ್ಧನನ ಸಮಾಧಿ ಎಲ್ಲಿದೆ.? ಹವಳ್ಳಿ ಶಾಸನದಲ್ಲಿರುವುದು ಸುಳ್ಳೆ.?ರಾಜವಿಷ್ಣುವರ್ಧನನ ಶವ ಕಾಣದಂತೆ ಮಾಯಾವಾಗಿದ್ದಾದರೂ ಎಲ್ಲಿ.?
✍️. ಎಂ.ಎ.ಸಲಾವುದ್ದೀನ್
ಹೊಯ್ಸಳರ ಮೂಲ ಸ್ಥಾನ ತಾಲ್ಲೂಕಿನ ಶಶಕಪುರ ಈಗಿನ ಅಂಗಡಿ ಗ್ರಾಮವಾಗಿದ್ದರೆ. ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನನ ಸಮಾಧಿ ಮೂಡಿಗೆರೆ ಪಟ್ಟಣದ ಕೆಲವೇ ಕಿಲೋ ಮೀಟರ್ ಗಳ ಅಂತರದಲ್ಲಿ ಗೋಚರಿಸಿದ್ದು ಅಚ್ಚರಿಯ ಸಂಗತಿಯಾಗಿದೆ.
ಕಳೇದೆರಡು ವರ್ಷಗಳ ಹಿಂದೆ ಚಂದನ ಸುದ್ದಿ ಪತ್ರಿಕೆ & ಯೂಟ್ಯೂಬ್‌ಗೆ ಈ ಸಮಾಧಿ ಪತ್ತೆಯಾಗಿದ್ದು ವರದಿ ಮತ್ತು ಪ್ರಸಾರವನ್ನು ಮಾಡಿತ್ತು. ವರದಿಯನ್ನು ಗಮನಿಸಿದ ಹಾಸನ ಪುರಾತತ್ವ ಇಲಾಖೆ ಅಧಿಕಾರಿಗಳು ಅಂದಿನ ತಹಸೀಲ್ದಾರ್ ನಾಗರಾಜ್ ಬಂದು ಹೋದರು ಆಷ್ಟೇ. ಆದರೇ ಅದರ ಬಗ್ಗೆ ಏನು ಮಾತನಾಡಲಿಲ್ಲಾ. ಜನಪ್ರತಿನಿಧಿಗಳು ಸುಮ್ಮನಿರುವುದು ಗಮನಿಸಿದರೆ ನಾಡಿನ ದೊರೆ ಕನ್ನಡದ ದೊರೆ ರಾಜ ವಿಷ್ನುವರ್ಧನನ ಶವ ಸಮಾಧಿಯಲ್ಲೆ ಸಮಾಪ್ತಿಯಾದಂತಿದೆ.
ಪತ್ರಿಕೆ ಕೇಳುವ ಪ್ರಶ್ನೆ ಏನೆಂದರೆ ರಾಜ ವಿಷ್ಣುವರ್ಧನನ ಸಮಾಧಿ ಎಲ್ಲಿದೆ.? ಇದುವರೆಗೂ ಏಕೆ ಬೆಳಕಿಗೆ ಬಂದಿಲ್ಲಾ. ಆಲ್ದೂರು ಹವಳ್ಳಿ ಶಾಸನದಲ್ಲಿರುವುದು ಸುಳ್ಳೆ.?ಹಾಗಾದರೆ ವಿಷ್ಣುವರ್ಧನನ ಶವ ಕಾಣದಂತೆ ಮಾಯಾವಾಗಿದ್ದಾರೂ ಎಲ್ಲಿ.? ಇದಕ್ಕೆ ಉತ್ತರಿಲು ಮೀನಾಮೇಷ ಏಣಿಸುತ್ತಿರುವುದನ್ನು ಗಮನಿಸಿರೆ ಹಲವು ಅನುಮಾನಗಳು ಮೂಡುತ್ತವೆ. ಹಿರಿಯ ಲೇಖಕರಾದ ದಿ.ಎಂ.ಕೆ.ದೊಡ್ಡಪ್ಪಗೌಡರು ಇತಿಹಾಸ ಸಹಿತ ಹೊಯ್ಸಳ ದೊರೆ ವಿಷ್ಣುವರ್ಧನನ ಶವದ ಬಗ್ಗೆ ಸರ್ಕಾರಕ್ಕೂ ಹಾಗೂ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಹವಳ್ಳಿ ಶಾಸನದಲ್ಲಿರುವ ಬಗ್ಗೆ ಸಂಪೂರ್ಣ ತಿಳಿಸಿದ್ದರು ಅಧಿಕಾರಿಗಳಾಗಲಿ
ಮೌನವಾಗಿರುವುದೇಕೆ ಇವೆಲ್ಲವೂ ಒಂದು ನಿಗೂಡ ಪ್ರಶ್ನೆಯಾಗೇ ಉಳಿದಿದೆ.
ಸಾಹಿತಿಗಳು ವಿಷ್ಣುವರ್ಧನನ ಸಮಾಧಿ ಬಗ್ಗೆ ಅನೇಕ ರೀತಿಯ ಹೋರಾಟಗಳನ್ನು ತೆರೆಯ ಮರೆಯಲ್ಲಿ ನಡೆಸುತ್ತಾ ಬಂದಿದ್ದಾರೆ ಆದರೂ ಯಾವುದೇ ಪ್ರಯೋಜನ ವಾಗದೇ ಇರುವುದು ಶೂಚನಿಯ ಸಂಗತಿಯಾಗಿದೆ.
ಚಂದನ ಸುದ್ದಿ ಪತ್ರಿಕೆ ಶಶಕಪುರದ ಹೊಯ್ಸಳರ ಸಂಪೂರ್ಣ ಇತಿಹಾಸ ಹುಡುಕಲು ಹೊರಟಾಗ ಮೂರು ಪುಸ್ತಕಗಳು ದೊರೆತಿದ್ದು ಅದನ್ನು ಆದರಿಸಿ ಹೊರಟಾಗ ರಾಜ ವಿಷ್ಣುವರ್ಧನನ ಸಾವು ಮತ್ತು ಆತನ ಕಳೇ ಬರಹ ಎಲ್ಲಿದೆ ಎಂದು ಗೌಪ್ಯವಾಗಿದ್ದು ಮತ್ತಷ್ಟು ಕೆದಕಿದಾಗ ವಿಷ್ಣುವರ್ಧನನ ಮೂಲ ರಾಜಧಾನಿ ದ್ವಾರಸಮುದ್ರವಾಗಿದ್ದರೂ, ಉಪ ರಾಜಧಾನಿಯನ್ನಾಗಿ ಉತ್ತರ ಕರ್ನಾಟಕದ ಬಂಕಾಪುರವನ್ನು ಮಾಡಿಕೊಂಡಿದ್ದನು.
ಬಂಕಾಪುರದಲ್ಲಿರುವಾಗಲೇ ಕ್ರಿ.ಶ.1141 ರಲ್ಲಿ ಅಕಾಲ ಮೃತನಾದನೆಂದು.? ಆತನ ಕಳೆಬರವನ್ನು ಶಶಕಪುರ (ಅಂಗಡಿ)ಅಥವಾ ಮೂಲ ರಾಜಧಾದೋರಸಮುದ್ರ(ಹಳೇಬೀಡಿಗೆ ಕೊಂಡೊಯ್ದು ಪಟ್ಟದಾನೆಯ ಮೇಲೆ ಪಾರ್ಥಿವ ಶರೀರವಟ್ಟು ರಾಜ್ಯ ಕೋಶದೊಂದಿಗೆ ನೂರಾರು ಆಪ್ತರೊಂದಿಗೆ ಮೂಡಿಗೆರೆ ಸುಂಡೇಕೆರೆ ಹಳ್ಳದ ಸಮೀಪ ಬರುವಾಗ ತಳಿಗೆ ನಾಡಿನ ಮರಿಯಾಳ ಪಳ್ಳಿಯ ಬಿಣ್ಣಗೌಡ ಮತ್ತು ಭೂತೇಗೌಡರು ಶವವನ್ನು ತಡೆದಾಗ. ರಾಜನ ಶವವನು ಸಾಗಿಸುತ್ತಿದ್ದ ಮುಖಂಡ ಬೊಪ್ಪಣ್ಣ ದೇವಗೂ ಇವರಿಗೂ ಕಾಳಗವೇ ನಡೆದು ಅದರಲ್ಲಿ ಎದುರಾಳಿ ಭೂತೇಗೌಡ ಸಾವನ್ನಪ್ಪಿದನೆಂದು.? ವಾತವರಣ ಗಲಿಬಿಲಿಯಾಗುತ್ತದೆ. ಇದರ ನಡುವೇ ಪಟ್ಟದಾನೆಯನ್ನು ಮತ್ತು ರಾಜಕೋಶವನು ಬಿಣ್ಣಗೌಡ ಕೊಳ್ಳೇ ಹೊಡೆಯುತ್ತಾನೆ. ಇವೆಲ್ಲದರ ನಡುವೇ ರಾಜ ವಿಷ್ಣುವರ್ಧನನ ಕಳೆಬರವನ್ನು ಸುಂಡೆಕೆರೆ ಹಳ್ಳದಿಂದ 500 ಮೀಟರ್ ದೂರದಲ್ಲಿ ಗುಂಡಿಯನ್ನು ತೋಡಿ ಶವವನ್ನು ಮಣ್ಣುಮಾಡಿ ಅದರ ಗುರುತಾಗಿ ಮೂರು ಅಡಿ ಎತ್ತರದ ನಾಲ್ಕು ಕಲ್ಲುಗಳನ್ನು ನಿಲ್ಲಿಸಲಾಗಿತ್ತೆಂದು ಅದರಲ್ಲಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಸಿಡಿಲು ಬಡಿದ ಕಾರಣ ಒಂದು ಕಲ್ಲು ಒಡೆದು ಹಾರಿದ್ದು ಇನ್ನುಳಿದ ಮೂರು ಕಲ್ಲುಗಳು ಎಲ್ ಆಕಾರದಲ್ಲಿ ಉಳಿದುಕೊಂಡಿದೆ ಎಂದು ವಿವರಿಸಲಾಗಿತ್ತು.
ಇದು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಹವಳ್ಳಿ ಶಾಸನದಲ್ಲಿದೆ ಎಂದು ಪ್ರಕಟವಾಗಿದ್ದು. ಅದನ್ನು ಬೆನ್ನಟ್ಟಿದ ಪತ್ರಕರ್ತರಿಗೆ ಪುಸ್ತಕದಲ್ಲಿ ತಿಳಿಸಿದಂತೆ ಎಲ್ ಆಕಾರದಲ್ಲಿ ಮೂರು ಅಡಿ ಕಲ್ಲುಗಳು ಸುರಕ್ಷಿತವಾಗಿದ್ದು ಸಿಡಿಲಿಗೆ ಬಡಿದ ಕಲ್ಲೊಂದು ಮತ್ತೊಂದು ಕಲ್ಲಿನ ಪಕ್ಕದಲ್ಲೇ ಬಿದ್ದಿದ್ದು ಕಂಡು ಬಂದಿದ್ದು. ಇದರ ಬಗ್ಗೆ ಸಂಶೋಧನೆ ನಡೆಸುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ರಾಜ ವಿಷ್ಣುವರ್ಧನನ ಸಮಾಧಿಯೂ ಇದೇ ಎಂಬುದು ಹಿರಿಯರಿಗೆ ತಿಳಿದಿತ್ತು ಆದರೆ ಅದನು ಇಂದಿನ ಯುವ ಪೀಳಿಗೆಗೆ ಹೇಳದೆ ಮುಚ್ಚಿಟ್ಟಿದ್ದು ಒಂದು ದುರಂತವಾದರೆ, ಎಲ್ಲಾ ದೊರೆಗಳ ಸಮಾಧಿಗಳ ಬಗ್ಗೆ ವಿಶ್ಲೇಷಣೆಗಳಿವೆ ಆದರೆ ರಾಜ ವಿಷ್ಟುವರ್ಧನನ ಸಮಾಧಿ ಬಗ್ಗೆ ಇನ್ನು ಗೌಪ್ಯವಾಗಿರುವುದನ್ನು ಗಮಸಿದರೆ ಅಲ್ಲಿಯೂ ಸಲ್ಲದ, ಇಲ್ಲಿಯೂ ಸಲ್ಲದ ರಾಜವಿಷ್ಣುವಧನನ ಕಳೆಬರ ದಂತಕಥೆಯಾಗಿದೆ.
ಈ ಸಮಾಧಿಯ ಬಗ್ಗೆ ಮೂಡಿಗೆರೆಯ ಸ್ವಾತಂತ್ತ್ಯ ಹೋರಾಟಗಾರರಾದ ಮಾಕೋನಹಳ್ಳಿಯ ದಿ.ಎಂ.ಕೆ.ದೊಡ್ಡಪ್ಪಗೌಡರ ಬರಹವೇ ಮೂಲ ತಳಪಾಯವಾಗಿದೆ.
ಇನ್ನಾದರೂ ರಾಜ್ಯ ಸರ್ಕಾರ ಮುಂದಿನ ಪೀಳಿಗೆಗೆ ಭೂಮಿಯಲ್ಲಿ ಅಡಗಿರುವ ರಾಜ ವಿಷ್ಣುವರ್ಧನನ ಕಳೆಬರಕ್ಕೆ ಮೆರಗು ತಂದು ಕೊಡಬಹುದೇ ಎಂಬುವುದೇ ಮಲೆನಾಡಿಗರ ಒತ್ತಾಸೆಯಾಗಿದೆ.