ಬೆಳ್ತಂಗಡಿ: ಎನ್ವಿ ಗ್ರೀನ್ ಬಯೋಟೆಕ್ ಕಂಪೆನಿ ಒಡೆಯ ಅಶ್ವಥ್ ಹೆಗ್ಡೆ ಹಾಗೂ ಮೂರು ಮಂದಿ ಸೇರಿ ಪ್ಲಾಸ್ಟಿಕ್ ಕವರ್ ತಯಾರಿಸುವ ಯಂತ್ರ ಕೊಟ್ಟು ಅಂದ್ರ ಮೂಲದ ಉದ್ಯಮಿ ಪ್ರಣಯ್ ಕುಮಾರ್ ಎಂಬವರಿಗೆ ಮೋಸ ಮಾಡಿದ್ದಾರೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ನಕಲಿ ಯಂತ್ರಗಳ ಬಗ್ಗೆ ಪ್ರಚಾರಗಿಟ್ಟಿಸಿ ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಅಶ್ವಥ್ ಹೆಗ್ಡೆ ಹಾಗೂ ಅವರ ಕಂಪೆನಿಯ ಡೈರೆಕ್ಟರ್ ಗಳಾದ ಅಕ್ಷತಾ ಹೆಗ್ಡೆ, ರಾಘವೇಂದ್ರ ನಾಯಕ್ ಇವರುಗಳ ಮೇಲೆ ಆಂದ್ರ ಮೂಲದ ಉಧ್ಯಮಿ ಪ್ರಣಯ್ ಕುಮಾರ್ ಎಂಬವರು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಅಶ್ವತ್ಥ್ ಹೆಗ್ಡೆ ವಿರುದ್ಧ ಈ ಹಿಂದೆಯೂ ನೀಲಿಮಾ ಎಂಬವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್ ಚೀಲ ಕಂಡು ಹಿಡಿದಿರುವುದಾಗಿ ಕೇಳಿ ನೀಲಿಮಾ ಅವರನ್ನು ನಂಬಿಸಿದ್ದರು ಎನ್ನಲಾಗಿದೆ. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ ಹಾಗೂ ಅನುಭವಿ ಕಾರ್ಮಿಕರನ್ನು ನೀಡುವುದಾಗಿ ಹೇಳಿ ನಮ್ಮನ್ನು ನಂಬಿಸಿದ್ದರು ಎಂದು ನೀಲಿಮಾ ಅವರ ದೂರಿನಲ್ಲಿ ತಿಳಿಸಲಾಗಿದೆ.
79 ಲಕ್ಷ ರೂಪಾಯಿ ಹಣ ಪಡೆದು, ಆರ್ಗ್ಯಾನಿಕ್ ಬ್ಯಾಗ್ ತಯಾರಿಕೆಗೆ ಕಚ್ಚಾ ವಸ್ತು ನೀಡದೆ, ಅನುಭವವಿಲ್ಲದ ಕಾರ್ಮಿಕರನ್ನು ನೀಡಿ ನಮ್ಮನ್ನು ಮೋಸ ಪಡಿಸಲಾಗಿದೆ ಎಂದು ನೀಲಿಮಾ ಅವರು ಅಶ್ವತ್ಥ್ ಹೆಗ್ಡೆ ಹಾಗೂ ಉಳಿದ ಡೈರೆಕ್ಟರ್ ಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.