ಅಮೃತಬಳ್ಳಿ ಉಪಯುಕ್ತತೆ ಬ್ರಿಟನ್ ಅಂಗೀಕಾರ

ಅಂತಾರಾಷ್ಟ್ರೀಯ

ಯಕೃತ್ತನ್ನು ಆರೋಗ್ಯಕರವಾಗಿಡಲು ಮತ್ತು ದೇಹದ ಜೀವಕೋಶಗಳ ಅವನತಿಯನ್ನು ತಡೆಯಲು ಸಹಾಯಕ; ಸಂಶೋಧನೆಯಿಂದ ದೃಢ

ಯಕೃತ್ ಅನ್ನು ಆರೋಗ್ಯಕರ ವಾಗಿಡುವ ಸಾಮರ್ಥ್ಯವನ್ನು (ಹೆಪಟೊಪ್ರೊಟೆಕ್ಟಿವ್) ಅಮೃತಬಳ್ಳಿ (ಗಿಲೋಯ್) ಹೊಂದಿದೆ. ಅಲ್ಲದೇ, ಇದು ಇತರ ಪ್ರಯೋಜನಕಾರಿ ಅಂಶಗಳನ್ನೂ ಹೊಂದಿದೆ ಎಂದು ಬ್ರಿಟನ್ ಈಗ ಧೃಡೀಕರಿಸಿದೆ. ಇದನ್ನು ಗ್ರೇಟ್ ಬ್ರಿಟನ್ ನ ಜರ್ನಲ್ ಆಫ್ ದಿ ರಾಯಲ್ ಫಾರ್ಮಾ ಸ್ಯುಟಿಕಲ್ ಸೊಸೈಟಿಯ ಪ್ರಸಿದ್ಧ ಸಂಶೋಧನಾ ಪತ್ರಿಕೆ ‘ಜರ್ನಲ್ ಆಫ್ ಫಾರ್ಮಸಿ ಆಂಡ್ ಫಾರ್ಮಕಾಲಜಿ’ ನಲ್ಲಿ ಪ್ರಕಟಿಸಲಾಗಿದೆ.

ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಸಂಶೋಧನಾ ಲೇಖನದಲ್ಲಿ ಅಮೃತಬಳ್ಳಿಯ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. ಅಮೃತಬಳ್ಳಿಯು ಯಕೃತ್ತನ್ನು ಆರೋಗ್ಯಕರವಾಗಿಡಲು ಮತ್ತು ದೇಹದ ಜೀವಕೋಶಗಳ ಅವನತಿಯನ್ನು ತಡೆಯಲು ಮತ್ತು ಯಕೃತಿಗೆ ರಕ್ಷಣೆ ನೀಡಲು ಸಹಾಯಕವಾಗಿದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ. ಅಮೃತಬಳ್ಳಿಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಮೃತಬಳ್ಳಿಯನ್ನು ಪ್ರತಿದಿನ (ಆಹಾರದ ರೂಪದಲ್ಲಿ) ಬಳಸುವುದರಿಂದ ಅನೇಕ ರೋಗಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ಲೇಖನದಲ್ಲಿ ಹೇಳಲಾಗಿದೆ. ಯಕೃತ್ತನ್ನು ರಕ್ಷಿಸುವ ಪೂರಕ ಆಹಾರವಾಗಿ ಅಮೃತಬಳ್ಳಿಯನ್ನು ಬಳಸಬಹುದು.