ವಿಟ್ಲ ಪೊಲೀಸ್ ಠಾಣಾಯಲ್ಲಿ ಪ್ರಕರಣ ಸಂಖ್ಯೆ: 127/2015 ಕಲಂ: 457,380. IPC ಪ್ರಕರಣದಲ್ಲಿ ಆರೋಪಿಯಾಗಿದ್ದ ಇಬ್ರಾಹಿಂ ಮುಜಾಂಬಿಲ್ (28), ವಾಸ. ಕ್ಯಾಂಕೊ ಕಾಲೊನಿ, ಬಾಯರ್ ಪದವು ಮನೆ, ಕಾಸರಗೋಡು ಕೇರಳ. ಎಂಬಾತನು ಮಾನ್ಯ ನ್ಯಾಯಾಲಯಕ್ಕೊ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆತನನ್ನು ದಿನಾಂಕ 27/3/24 ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ವಿಧ್ಯಾ ಮತ್ತು ಸಿಬ್ಬಂದಿಗಳಾದ ASI ಜಯರಾಮ, PC ಆಶೋಕ ಹಾಗೂ HC ರಾಧಾಕೃಷ್ಣ (ಪುತ್ತೂರು ನಗರ ಠಾಣೆ ) ರವರುಗಳ ತಂಡ, ಪುತ್ತೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ವಿದಿಸಿರುತ್ತದೆ.
ಈತನ ವಿರುದ್ದ ವಿಟ್ಲ ಠಾಣೆಯಲ್ಲಿ ಎರಡು ಪ್ರಕರಣ, ಕೇರಳದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪುತ್ತೂರು ನಗರ ಠಾಣೆಯಲ್ಲಿ 1 ಪ್ರಕರಣ, ಅಂಧ್ರಪ್ರದೇಶದ ವಿಶಾಖಪಟ್ಟಣ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣ, ಒಟ್ಟು 05 ಪ್ರಕರಣಗಳು ದಾಖಲಾಗಿರುತ್ತದೆ.