ಸ್ಟಿಂಗ್ ಆಪರೇಶನ್: ಅಸಲಿ ಸತ್ಯ ಬಯಲು!

ಅಂತಾರಾಷ್ಟ್ರೀಯ

ಕೋಲ್ಕತ್ತಾ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣದ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಥಳೀಯ ಚಾನೆಲ್ ವೊಂದು ಮಾಡಿದ ಸ್ಪಿಂಗ್ ಆಪರೇಷನ್ ನ ವಿಡಿಯೋ ದಲ್ಲಿ ಹೇಳಲಾಗುತ್ತಿದೆ.

ಸಂದೇಶ್ ಖಾಲಿಯಲ್ಲಿ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವಾದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದ ಪ್ರಕರಣ ಹೆಚ್ಚು ಸದ್ದು ಮಾಡಿತ್ತು. ಆದರೆ ಶನಿವಾರ ಸ್ಥಳೀಯ ಚಾನೆಲ್ ವೊಂದು ನಡೆಸಿದ್ದ ಸ್ವಿಂಗ್ ಆಪರೇಷನ್ ನಲ್ಲಿ ಬಿಜೆಪಿಯ ಬೂತ್ ಮುಖ್ಯಸ್ಥ ಎಂದು ಹೇಳಿಕೊಳ್ಳುವ ಒಬ್ಬರು, ಈ ಆರೋಪವೆಲ್ಲವೂ ಸುಳ್ಳಾಗಿದ್ದು, ನಾವು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಅವರ ಆದೇಶದಂತೆ ಈ ರೀತಿ ಮಾಡಿದ್ದೇವೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.

ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಂಗಾಳದ ಪ್ರತಿಷ್ಠೆ ಮತ್ತು ಖ್ಯಾತಿಯನ್ನು ಹಾಳು ಮಾಡಲು ಬಿಜೆಪಿಯ ಪ್ರಯತ್ನಗಳನ್ನು ಜನರು ನೋಡಬೇಕು ಎಂದು ಗುಡುಗಿದರು.

ಸಂದೇಶಖಾಲಿ ಕುಟುಕು ವಿಡಿಯೋವನ್ನು ನೋಡಿ ನಾನು ಪದಗಳಲ್ಲಿ ಹೇಳಲಾಗದಷ್ಟು ಆಘಾತಕ್ಕೊಳಗಾಗಿದ್ದೇನೆ. ಬಂಗಾಳದ ಪ್ರಗತಿಪರ ಚಿಂತನೆ ಮತ್ತು ಸಂಸ್ಕೃತಿಯ ಮೇಲಿನ ದ್ವೇಷವನ್ನು ಬಂಗಾಳದ ವಿರೋಧಿಗಳು ಸಾಧ್ಯವಿರುವ ಎಲ್ಲ ಹಂತಗಳಲ್ಲಿ ದೂಷಿಸಲು ಎಲ್ಲಾ ರೀತಿಯ ಪಿತೂರಿಯನ್ನು ರೂಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭಾರತದ ಇತಿಹಾಸದಲ್ಲಿ ಹಿಂದೆಂದೂ ದೆಹಲಿಯಲ್ಲಿಯ ಆಡಳಿತಾರೂಢ ಪಕ್ಷವು ಇಡೀ ರಾಜ್ಯ ಮತ್ತು ಅಲ್ಲಿನ ಜನರನ್ನು ದೂಷಿಸಲು ಪ್ರಯತ್ನಿಸಲಿಲ್ಲ. ದೆಹಲಿಯ ಪಿತೂರಿ ಆಡಳಿತದ ವಿರುದ್ಧ ಬಂಗಾಳವು ಹೇಗೆ ಕ್ರೋಧದಿಂದ ಏರುತ್ತದೆ ಮತ್ತು ಅವರ ಬಿಕೋರ್ಜಾನ್ ಅನ್ನು ಹೇಗೆ ಖಚಿತಪಡಿಸುತ್ತದೆ ಎಂಬುದನ್ನು ಇತಿಹಾಸವು ಸಾಕ್ಷಿಯಾಗಿಸುತ್ತದೆ ಎಂದು ಹೇಳಿದರು.