ಸಂಘದೊಂದಿಗೆ ಸಂಪರ್ಕವಿರುವ ಪೊಲೀಸ್ ಅಧಿಕಾರಿಯೊಬ್ಬರಿಂದ ಹೇಮಂತ್ ಕರ್ಕರೆ ಹತ್ಯೆ: ವಿಜಯ್ ವಾಡೆತ್ತಿಕಾರ್

ರಾಷ್ಟ್ರೀಯ

2008ರ ಮುಂಬೈ ದಾಳಿಯ ಸಂದರ್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥರಾದ ಹೇಮಂತ್ ಕರ್ಕರೆ ಅವರನ್ನು ಪಾಕಿಸ್ತಾನಿ ಭಯೋತ್ಪಾದಕರು ಹತ್ಯೆ ಮಾಡಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಆರ್‌ಎಸ್‌ಎಸ್‌ಗೆ ಹತ್ತಿರ ಇರುವ ಪೊಲೀಸ್ ಅಧಿಕಾರಿಯೊಬ್ಬರು ಹಾರಿಸಿದ ಗುಂಡಿಗೆ ಕರ್ಕರೆ ಬಲಿಯಾಗಿದ್ದಾರೆ. ಪ್ರಸ್ತುತ ಮುಂಬೈ ಉತ್ತರ ಕೇಂದ್ರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ವಕೀಲ ಉಜ್ವಲ್ ನಿಕಮ್ ಅವರು ಆರೋಪಿಗಳನ್ನು ರಕ್ಷಿಸಲು ಸಾಕ್ಷ್ಯವನ್ನು ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ನಿಕಮ್ ಒರ್ವ ವಕೀಲನಲ್ಲ ಆತ ದೇಶದ್ರೋಹಿ. ಕರ್ಕರೆಯವರು ಅಜ್ಮಲ್ ಕಸಬ್‌ನಂತಹ  ಉಗ್ರರ  ಗುಂಡುಗಳಿಂದ ಮೃತಪಟ್ಟಿಲ್ಲ. ಆದರೆ ಸಂಘಕ್ಕೆ ಹತ್ತಿರವಿರುವ ಪೊಲೀಸರ ಬುಲೆಟ್‌ನಿಂದ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. 26/11 ದಾಳಿಯಲ್ಲಿ ಮಡಿದ ಐಪಿಎಸ್‌ ಅಧಿಕಾರಿ ಹೇಮಂತ್ ಕರ್ಕರೆ ಅವರಿಗೆ ಮರಣೋತ್ತರವಾಗಿ 2009 ರಲ್ಲಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು.