ಲಾಲನೆಯರ ಮೋಹಕ್ಕೆ ಬಿದ್ದು, ‘DRDO’ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ರವಾನೆ ಮಾಡಿದ ಗುಜರಾತ್ ಮೂಲದ ಪ್ರವೀಣ್ ಮಿಶ್ರಾ ಬಂಧನ

ಅಂತಾರಾಷ್ಟ್ರೀಯ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಜರಾತ್ ಭರೋಜ್ ಜಿಲ್ಲೆಯ ಪ್ರವೀಣ್ ಮಿಶ್ರಾ ಎಂದು ಗುರುತಿಸಲಾಗಿದೆ.

ಲಾಲನೆಯರ ಹನಿಟ್ರ್ಯಾಪ್ ಬೇಟೆಯ ನಂತರ ಆರೋಪಿ ಪ್ರವೀಣ್ ಮಿಶ್ರಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಯಾರಿಸಿದ ಡ್ರೋನ್ ಬಗ್ಗೆ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಯೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಎಸ್ಎಲ್ ಸಿಐಡಿ ಕ್ರೈಂ ಟೀಂ ಕಣ್ಗಾವಲು ನಡೆಸಿ, ಪ್ರವೀಣ್ ಮಿಶ್ರಾ ಎಂಬ ವ್ಯಕ್ತಿಯನ್ನು ಭೇಟಿಯಾಗಿ, ಅತನ ಫೋನ್ ಪರಿಶೀಲಿಸಿ ಆತನನ್ನು ವಶಕ್ಕೆ ಪಡೆದಿರುತ್ತಾರೆ. ಪ್ರವೀಣ್ ಮಿಶ್ರಾನನ್ನು ಹನಿಟ್ರ್ಯಾಪ್ ಬಳಗೆ ಸಿಲುಕಿಸಿ, ಆತನಿಂದ ಭಾರತದ ರಕ್ಷಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐ ಪಡಕೊಂಡಿದೆ. ಮಾತ್ರವಲ್ಲದೆ ಪಾಕಿಸ್ಥಾನದ ಐಎಸ್ಐ ಭಾರತದ ರಕ್ಷಣಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇತರ ಹಲವಾರು ಜನರನ್ನು ಸಹ ಗುರಿಯಾಗಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ. ಪ್ರವೀಣ್ ಮಿಶ್ರಾ ಮೂಲತಃ ಬಿಹಾರದ ಮುಜಾಫರಪುರ ಎಂಬಲ್ಲಿಯ ನಿವಾಸಿ ಎಂದು ಸಿಐಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ