ಮೋದಿಗೆ ಸಂಕಷ್ಟ.! ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೋದಿ ವಿರುದ್ದ ಖಾಸಾಗಿ ದೂರು

ರಾಷ್ಟ್ರೀಯ

2024ರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ಮಾಡಲಾಗಿದ್ದ ಭಾಷಣ ಸಂಬಂಧ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಹೆಬ್ಬಾಳದ ನಿವಾಸಿಯಾಗಿರುವ ಜಿಯಾವುರ್​ ರಹಮಾನ್​​ ನೊಮಾನಿ ಎಂಬುವವರು ಸ್ಪೆಷಲ್​​​ ಮ್ಯಾಜಿಸ್ಟ್ರೇಟ್​​​​​ ಕೋರ್ಟ್​​​​ನಲ್ಲಿ ಖಾಸಗಿ ದೂರನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾರಿ ಕಾಂಗ್ರೆಸ್​​​​ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ಮುಸ್ಲಿಂ ಸಮುದಾಯಕ್ಕೆ, ನುಸುಳುಕೋರರಿಗೆ ಹಂಚಲಿದೆ ಎಂದು ಮೋದಿ ಅವರು ಕಾಂಗ್ರೆಸ್​​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಅವರ ಈ ಭಾಷಣಕ್ಕೆ ಸಂಬಂಧಿಸಿ ಬಿಜೆಪಿ ಸಮರ್ಥಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಭಾವನೆಗಳನ್ನು ತಿಳಿಸಿದ್ದಾರೆ. ವಿರೋಧ ಪಕ್ಷಗಳಿಗೆ, ಇಂಡಿಯಾ ಮೈತ್ರಿಕೂಟಕ್ಕೆ ದೇಶವಾಸಿಗಳಿಗಿಂತ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ ಮುಸ್ಲಿಮರೇ ಮುಖ್ಯಾವಾಗಿದೆ ಎಂದು ಹೇಳಿತ್ತು. ಈ ಮೂಲಕ ದ್ವೇಷ ಹರಡುವ, ಶಾಂತಿ ಭಂಗ ಉಂಟು ಮಾಡಲು ಯತ್ನಿಸಿದ್ದಾರೆ. ಹಾಗಾಗಿ ಅವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಶಾಂತಿಗೆ ಭಂಗ ಹಾಗೂ ಕ್ರಿಮಿನಲ್ ಪ್ರಚೋದನೆಯ ಭಾಷಣ ಮಾಡಿರುವ ಆರೋಪದಡಿ ಐಪಿಸಿಯ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಲು ದೂರು ನೀಡಲಾಗಿತ್ತು. ಆದರೆ, ಪ್ರಕರಣ ಚುನಾವಣಾ ಆಯೋಗದ ವ್ಯಾಪ್ತಿಗೆ ಬರಲಿದೆ ಎಂದು ತಿಳಿಸಿ ಅಮೃತಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಆದ್ದರಿಂದ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಬೇಕು, ಎಂದು ಅರ್ಜಿಯಲ್ಲಿ ಕೋರಿದ್ದರೆ.