ಸಾವಿನ ರಹದಾರಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎಕ್ಸ್ ಪ್ರೆಸ್ ವೇ ನಲ್ಲಿ ಅಪಘಾತ ಇಳಿಮುಖ

ರಾಜ್ಯ

ಪೊಲೀಸ್ ಇಲಾಖೆಯ ಪ್ರಯಾಣಿಕ ಸುಧಾರಣ ಕ್ರಮದ ಪರಿಣಾಮ ಅಪಘಾತಗಳ ಸಂಖ್ಯೆ ಇಳಿಮುಖ

ಸಾವಿನ ರಹದಾರಿ ಎಂದೇ ರಾಜ್ಯದಲ್ಲಿ ಕುಖ್ಯಾತಿ ಪಡೆದಿದ್ದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಇತ್ತೀಚೆಗೆ ಅಪಘಾತ ಸಂಖ್ಯೆ ಇಳಿಕೆಯಾಗುತ್ತಿದ್ದು, ಮೂರಂಕಿ ದಾಟಿದ್ದ ಸಾವಿನ ಸಂಖ್ಯೆಯು ಎರಡಂಕಿಗೆ ಬಂದಿದೆ. ಒಟ್ಟಾರೆ ಅಪಘಾತ ಸಂಬಂಧಿತ ಸಾವಿನ ಪ್ರಮಾಣ ಶೇಕಡಾ 69 ರಷ್ಟು ಕಡಿಮೆಯಾಗಿದೆ.

ಹೆದ್ದಾರಿಯಲ್ಲಿ ಪದೇ ಪದೆ ಸಂಭವಿಸುತ್ತಿದ್ದ ಅಪಘಾತ, ಸಾವಿನ ಪ್ರಮಾಣವು ಗಾಬರಿಗೊಳಿಸುವಂತಿದ್ದೆವು. ವಾಹನ ಚಾಲಕರು ನೆಮ್ಮದಿಯಾಗಿ ವಾಹನ ಚಲಾಯಿಸಲು ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ನಿರ್ಮಾಣ ಮಾಡಿತ್ತು. ಹಾಗಾಗಿ ಪೊಲೀಸ್ ಇಲಾಖೆ ಹೆದ್ದಾರಿಯನ್ನು ಪ್ರಯಾಣಿಕ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಹಲವು ಸುಧಾರಣ ಕ್ರಮ ಕೈಗೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.