ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿಯಾಗಿ ಗ್ರಾಮ ಪಂಚಾಯತ್ ನಲ್ಲಿ ನೀಡಲಾಗುತ್ತಿದ್ದ 9&11 ಗಳಿಗೆ ಮಂಗಳೂರಿನ ಮೂಡ ಕಛೇರಿಗೆ ಅನುಮತಿಗಾಗಿ ಹೋಗಬೇಕಾಗಿದ್ದು,ಇದು ದೂರದ ಗ್ರಾಮಗಳಿಂದ ಬರುವವರು 100 ಕಿ.ಲೋ ಗಿಂತ ಹೆಚ್ಚು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಸಾವಿರಾರು ಕಡತಗಳನ್ನು ವಿಲೇವಾರಿ ಮಾಡುವುದು ಮೂಡ ಸಿಬ್ಬಂದಿಗಳಿಗೂ ಅಸಾಧ್ಯವಾಗಿದ್ದು, ಇದರಿಂದ ಕಟ್ಟಡ ನಿರ್ಮಾಣ, ಸಾಲ ವ್ಯವಹಾರಕ್ಕೆ 9&11 ಸಕಾಲದಲ್ಲಿ ದೊರೆಯದೇ ಜನ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ತಾವು ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಬೇಕೆಂದು ವಿನಂತಿಸಿದರು.
ಈ ಬಗ್ಗೆ ಸ್ಪಂದಿಸಿದ ಸಚಿವರು,ಅದಿವೇಶನದ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರ ನಿಮ್ಮ ನಿಯೋಗ ಬೆಂಗಳೂರಿಗೆ ಬಂದರೆ ಗ್ರಾಮಾಭಿವೃದ್ದಿ, ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಯ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್,ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಲಾರೆನ್ಸ್ ಡಿಸೋಜ, ಕಾರ್ಪೋರೆಟರ್ ಎ.ಸಿ.ವಿನಯರಾಜ್ ಉಪಸ್ಥಿತರಿದ್ದರು.