ವಿಟ್ಲ ಠಾಣಾ ವ್ಯಾಪ್ತಿಯ ಕೊಡಂಗಾಯಿ ಬಲಿಪಗುಳಿಯಲ್ಲಿ ಕಳ್ಳರ ಕರಾಮತ್ತು.

ಕರಾವಳಿ

ಕಿಟಕಿಯ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು ವೃದ್ಧೆಯ ಕತ್ತು ಹಿಸುಕಿ ಚಿನ್ನಾಭರಣ ಕದ್ದೊಯ್ದು ಪರಾರಿ.

ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿ ಎಂಬಲ್ಲಿ ಕಳ್ಳತನ ನಡೆದಿದೆ. ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯ ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರಿಂದ ದುಷ್ಕೃತ್ಯ ನಡೆದಿದೆ. ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72)ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಹಿಂದಿನ ಕಾಲದ ಚಿನ್ನದ ಕಿವಿಯೋಲೆಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ.

ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಐಸಮ್ಮಾ ಅವರ ಸೊಸೆ ಬೆಳಗ್ಗೆ ಎದ್ದು ಅತ್ತೆಯನ್ನು ಎಚ್ಚರಿಸಲು ಬಂದಾಗ ಐಸಮ್ಮಾ ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು. ಪಾರ್ಶ್ವವಾಯು ಬಡಿದಿರಬೇಕೆಂದು ಶಂಕಿಸಿದ ಮನೆಯವರು ನೆರೆಯ ಸಂಬಂಧಿಕರಿಗೆ ಮಾಹಿತಿ ನೀಡಿದರು. ಅವರೆಲ್ಲ ಬಂದು ನೋಡಿದಾಗ ಕಿಟಕಿಯ ಸರಳು ತುಂಡರಿಸಿರುವುದು ಮತ್ತು ಮಹಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಆತಂಕಗೊಂಡ ಮನೆಯವರು ಮತ್ತಷ್ಟು ಪರಿಶೀಲಿಸಿದಾಗ ವೃದ್ಧೆಯ ಕಿವಿಯೋಲೆಗಳು ಕಳ್ಳತನ ಆಗಿರುವುದು ಸ್ಪಷ್ಟವಾಯಿತು. ಬಳಿಕ ಮಾಹಿತಿ ನೀಡಿ ವಿಟ್ಲ ಪೊಲೀಸರು ಮತ್ತು ಶ್ವಾನದಳ ಆಗಮಿಸಿದೆ.

ವೃದ್ಧೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲೈಮಾನ್ ಸಹೋದರ ಇಬ್ರಾಹಿಂ ನೀಡಿದ ದೂರಿನಂತೆ
ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 116/2024 ಕಲಂ:331(4),305 BNS ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.