ಬೆಳ್ತಂಗಡಿ: ಹಿಂದೂ ಸಮಾಜದ ರಕ್ಷಕನೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಾಸಕ ಪೂಂಜಾರಿಂದ ಬಾರ್ಯ ಗ್ರಾಮ ಪಂಚಾಯತ್ ಅಧೀನದ ಹಿಂದೂ ರುಧ್ರಭೂಮಿ ಮತ್ತು ಪ.ಜಾ ಮತ್ತು ಪ.ಪಂ.ದ ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದ ಅಭಿವೃದ್ಧಿಗೊಳಿಸುವುದನ್ನು ವಿರೋದಿಸಿ ಪೂಂಜಾ ಮತ್ತು ಪಟಾಲಂನಿಂದ ದಾಂದಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ಬೈದು, ತಲೆ ಕಡಿಯುತ್ತೇನೆಂದು ಬೆದರಿಕೆ ಒಡ್ಡಿರುವ ಹಿಂದುತ್ವದ ನಕಲಿ ಮುಖವಾಡ ಕಳಚಿಟ್ಟ ಬಿಟ್ಟಿದೆ.
ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮ ಪಂಚಾಯತ್ ಗೊಳಪಟ್ಟ ಪುತ್ತಿಲ ಗ್ರಾಮದ ಸರ್ವೆನಂಬ್ರ 73/2A ರಲ್ಲಿ 0.20 ಸೆಂಟ್ಸ್ ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ, ಹಾಗೂ 0.20 ಸೆಂಟ್ಸ್ ಪರಿಶಿಷ್ಟ ಪಂಗಡ ಸ್ಮಶಾನಕ್ಕೆ ಮೀಸಲಿಟ್ಟಿದ್ದು, ಅದೇ ಸರ್ವೆನಂಬ್ರ 66/IP ಯಲ್ಲಿ ೦.40 ಸೆಂಟ್ಸ್ ಜಾಗವನ್ನು ಹಿಂದೂರುಧ್ರ ಭೂಮಿಗೆ ಈ ಹಿಂದೆ ಕಂದಾಯ ಇಲಾಖೆಯಿಂದ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಲಾಗಿತ್ತು. ಈ ಜಾಗವನ್ನು ಅಭಿವೃದ್ಧಿ ಪಡಿಸಲು ನಿರ್ಣಯಿಸಿ ಗಡಿಗುರುತು ಮಾಡಲು ಬೆಳ್ತಂಗಡಿ ತಹಶೀಲ್ದಾರರಿಗೆ ಪತ್ರ ಬರೆಯಲಾಗಿತ್ತು.ದಿನಾಂಕ 20-07-2024 ರಂದು ತಹಶಿಲ್ದಾರರು, ತಾಲ್ಲೂಕು ಸರ್ವೆಯವರು, ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಪೊಲೀಸ್ ಬಂದೋಬಸ್ತ್ ನಲ್ಲಿ ಅಳತೆ ಮಾಡಲಾಗಿತ್ತು. ಅಳತೆ ಮಾಡಿ ಅಧಿಕಾರಿಗಳು ಹೊರಟು ಹೋದ ನಂತರ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಬೇಲಿ ಹಾಕಿ ಭದ್ರತೆ ಮಾಡುತ್ತಿರುವಾಗ ಏಕಾಏಕಿ ಹಿಂದೂ ಸಮಾಜದ ರಕ್ಷಣೆ ಮಾಡುವ ಹಿಂದುತ್ವದ ನಕಲಿ ಮುಖವಾಡದರಿಸಿರುವ ಶಾಸಕ ಪೂಂಜಾರ ಸೂಚನೆಯಂತೆ ಸ್ಥಳೀಯ ಬಿ.ಜೆ.ಪಿ. ಕಾರ್ಯಕರ್ತರಾದ ಸಂತೋಷ್, ಕೋಟ್ಯಪ್ಪ, ಸೂರಜ್ ಮತ್ತಿತರರು ಸೇರಿಕೊಂಡು ಅಕ್ರಮವಾಗಿ ಪ್ರವೇಶಿಸಿ ಬೇಲಿಯನ್ನು ತೆಗೆದು ಬಿಸಾಡಿ, ಅಧ್ಯಕ್ಷರಿಗೆ ಆಡಳಿತ ಮಂಡಳಿಯವರಿಗೆ ಅವಾಚ್ಯವಾಗಿ ಬೈದು, ಹಲ್ಲೆಗೆ ಮುಂದಾಗಿ, ತಲೆಯನ್ನು ಕಡಿಯುತ್ತೇನೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಸದ್ರಿ ಜಾಗದಲ್ಲಿರುವ ಮರಗಳನ್ನು ಕೂಡಾ ಈ ಹಿಂದೆ ಇದೇ ವ್ಯಕ್ತಿಗಳು ಅಕ್ರಮವಾಗಿ ಕಡಿದು ಮಾರಾಟ ಮಾಡಿದ ಬಗ್ಗೆ ಕೂಡಾ ನಾಗರಿಕರು ಆರೋಪಿಸುತ್ತಾರೆ. ಇದರಿಂದ ಸ್ಥಳೀಯವಾಗಿ ಅಶಾಂತಿ ಸೃಷ್ಠಿಸುವ ಹುನ್ನಾರ ಇದಾಗಿದೆ ಎಂದು ಪಂಚಾಯತ್ ಅಧ್ಯಕ್ಷರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಮತ್ತು ತಹಶಿಲ್ದಾರರಿಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಕೋರಿ ಲಿಖಿತ ದೂರು ನೀಡಿದ್ದಾರೆ ಎನ್ನಲಾಗಿದೆ.
ಇಂತಹ ಹಲವು ಕಿತಾಪತಿಗಳನ್ನು ತೆರೆಯ ಮರೆಯಲ್ಲಿ ಮಾಡುವ ಹಿಂದೂ ಸಮಾಜದ ರಕ್ಷಕ, ಶಾಸಕ ಪೂಂಜಾ ಮತ್ತು ಅವರ ಪಟಾಲಂನಿಂದ ನಡೆಯುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೊನೆಗೂ ಪೂಂಜಾರ ನಕಲಿ ಮುಖವಾಡ ಬಟಾಬಯಲಾಗಿದೆ.