ನಕಲಿ ದಾಖಲೆ ಸೃಷ್ಠಿಸಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಮಹಿಳೆ ಹಾಗೂ ನಕಲಿ ದಾಖಲೆ ಒದಗಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲು

ರಾಷ್ಟ್ರೀಯ

ಥಾಣೆ: ನಕಲಿ ದಾಖಲೆಗಳ ಆಧಾರದ ಮೇಲೆ ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಪಡೆದು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ 23 ವರ್ಷ ಪ್ರಾಯದ ಮಹಿಳೆಯ ವಿರುದ್ಧ ಹಾಗೂ ಆಕೆಗೆ ನಕಲಿ ದಾಖಲೆಗಳನ್ನು ಒದಗಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಮಹಿಳೆಯನ್ನು ನಗ್ಮಾ ನೂರ್ ಮಕ್ಸೂದ್ ಅಲಿ ಅಲಿಯಾಸ್ ಸನಮ್ ಖಾನ್ ಎಂದು ಗುರುತಿಸಲಾಗಿದ್ದು, ತನ್ನ ಹೆಸರನ್ನು ಬದಲಾಯಿಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮಗಳ ಜನನ ಪ್ರಮಾಣಪತ್ರವನ್ನು ಲೋಕಮಾನ್ಯ ನಗರದ ಕೇಂದ್ರದಿಂದ ಪಡೆದುಕೊಂಡು ನಂತರ ಈ ದಾಖಲೆಗಳನ್ನು ಪಾಸ್‌ಪೋರ್ಟ್ ಅರ್ಜಿಗೆ ಲಗತ್ತಿಸಿದ್ದಾರೆ ಎಂದು ವರ್ತಕ್ ನಗರದ ಅಧಿಕಾರಿ ತಿಳಿಸಿದ್ದಾರೆ.