ವಯನಾಡ್ ದುರಂತ ಬಗ್ಗೆ ಕೋಮು ಉದ್ರೇಕಕಾರಿ ಪೋಸ್ಟ್: ಪುತ್ತೂರು ವೈದ್ಯ ಮೇಲೆ ಎಫ್ ಐ ಆರ್

ರಾಷ್ಟ್ರೀಯ

ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಸಾವಿಗೀಡಾದವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಪೋಸ್ಟ್ ಮಾಡಿ ಉದ್ರೇಕಕಾರಿ ರೀತಿ ಒಂದು ಸಮುದಾಯವನ್ನು ಗುರಿಯಾಗಿಸಿ ಸಮುದಾಯ, ಧರ್ಮದ ಬಗ್ಗೆ ದ್ವೇಷ ಉಂಟು ಮಾಡುವ ಬರಹ ವಿನಿಮಯ ಮಾಡಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಹಲವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.

PUTTUR DOCTORS ಹಾಗೂ ಇನ್ನಿತರ ಗ್ರೂಪುಗಳಲ್ಲಿ “ಅಂದು ವಯನಾಡಿನ ನಡು ರಸ್ತೆಯಲ್ಲಿ ಹತ್ಯೇಗೀಡಾದ ಗೋವಿನ ಆತ್ಮಕ್ಕೆ ಶಾಂತಿ ಸಿಗುತ್ತಿದೆ..ದೇವರ ಮನೆಯಲಿ ಬೆಳಕಿರಬೇಕು..ಕತ್ತಲೆಯಲ್ಲ” “ಗೋ ಮಾತೆಯ ರಕ್ತ ಚೆಲ್ಲಿ ಮಲಿನವಾದ ಕೇರಳ ಭೂಮಿಯನ್ನು ಪ್ರಕೃತಿಯೇ ಕ್ಲೀನ್ ಮಾಡುತ್ತಿದೆ” ಎಂದು ಕೋಮು ಉದ್ರೇಕಕಾರಿ ಪೋಸ್ಟ್ ರವಾನಿಸಿದ್ದರು.

ಈ ಸಂಬಂಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಅಖಿಲ್, ಶರತ್ ಮಾಡಾವು, ಡಾ. ಪ್ರವೀಣ್ ಎಂಬವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.