ಬಸ್ ಡಿಕ್ಕಿ, ಆಕ್ಟಿವಾ ಸವಾರ ಗಂಭೀರ. ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಅಪಘಾತ.

ಕರಾವಳಿ

ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಸೇತುವೆ ಬಳಿ ಮಂಗಳೂರಿಗೆ ಸಂಚರಿಸುತ್ತಿದ್ದ ‘ಮಹೇಶ್’ ಹೆಸರಿನ ಖಾಸಗಿ ಬಸ್ಸಿಗೆ ಎದುರಿನಿಂದ ಬರುತ್ತಿದ್ದ ಆಕ್ಟಿವಾ ಸ್ಕೂಟರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರ ಕಟ್ಟತ್ತಿಲ ನಿವಾಸಿ. ಮುಝಾಂಬಿಲ್(30)ಅವರ ಕಾಲುಗಳು, ಮತ್ತೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.