ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಗುರ್ಮೆ ಗಣೇಶ್ ಗೌಡರ ಮನೆ ಸಮೀಪದ ಕಟ್ಟಡದಿಂದ ಜುಲೈ21ರ ತಡರಾತ್ರಿ ದುರಸ್ತಿಗಾಗಿ ತಂದಿರಿಸಿದ್ದ ಅಂದಾಜು 1,81,000/- ರೂ ಮೌಲ್ಯದ ಒಟ್ಟು 16 ಬೊರ್‌ವೆಲ್ ಪಂಪುಗಳನ್ನು ಯಾರೋ ಕಳ್ಳರು ವಾಹನದಲ್ಲಿ ಬಂದು ಕಳ್ಳತನ ನಡೆಸಿದ್ದರು. ಈ ಬಗ್ಗೆ ವಿಟ್ಲ ಠಾಣಾ ಅ.ಕ್ರ.119/2024 ಕಲಂ:303(2) ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು 14-08-2024 ರಂದು ಆರೋಪಿಯಾದ ಕಡಬ ತಾಲೂಕು ಪೆರಬೆ ಗ್ರಾಮದ ಕೋಚಕಟ್ಟೆ ನಿವಾಸಿ ಉಮರಬ್ಬ ಪುತ್ರ ಮಹಮ್ಮದ್ ಶಾಕೀರ್(22)ನನ್ನು ಬಂಧಿಸಿ ಕಳವುಗೈದ ಸೊತ್ತುಗಳು, ಸಾಗಾಟಕ್ಕೆ ಬಳಸಿದ್ದ ಕೆಎ-52-ಎ-8164ನೇ ನೊಂದಣಿ ನಂಬ್ರದ ಸುಪರ್ ಕ್ಯಾರಿ ವಾಹನ ಸಹಿತ ವಶಕ್ಕೆ ಪಡೆದಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 3,81,000/- ರೂ ಅಂದಾಜಿಸಲಾಗಿದೆ.
ಸದ್ರಿ ಪ್ರಕರಣದಲ್ಲಿ ನಾಪತ್ತೆಯಾದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ಬಂಟ್ವಾಳ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ವಿಜಯ ಪ್ರಸಾದ್ ರವರ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನಾಗರಾಜ್ ಹೆಚ್ ಈ ರವರ ನಿರ್ದೇಶನದಂತೆ, ಪೊಲೀಸ್ ಉಪ ನಿರೀಕ್ಷಕರಾದ ರತ್ನಕುಮಾರ್ ಎಂ ನೇತ್ರತ್ವದಲ್ಲಿ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ಕರುಣಾಕರ, ಶ್ರೀಧರ್ ಸಿ ಎಸ್, ಶಂಕರ ಸಂಶಿ, ಗದಿಗಪ್ಪ, ಮನೋಜ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ಭಾಗವಹಿಸಿರುತ್ತಾರೆ.