ಮಂಗಳೂರು ಸಿಸಿಬಿ ಘಟಕದ ಶರಣಪ್ಪ, ಮೋಹನ್, ನಾಗರಾಜ ರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗೌರವ

ಕರಾವಳಿ

ಮಂಗಳೂರಿನ ಕ್ರೈಂ ಚಟುವಟಿಕೆ ಹತ್ತಿಕ್ಕುವಲ್ಲಿ ಸಿಸಿಬಿ ಘಟಕದ ಪಾತ್ರ ಮಹತ್ವದ್ದು. ಹಲವಾರು ಅಪರಾಧ ಚಟುವಟಿಕೆಗಳನ್ನು ಭೇಧಿಸಿದ ಗರಿಮೆ ಸಿಸಿಬಿಯದ್ದು. ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಮೋಹನ್ ಕೆ.ವಿ ಮತ್ತು ಹೆಡ್ ಕಾನ್ಸ್ ಟೇಬಲ್ ಆದ ನಾಗರಾಜ ಚಂದರಗಿ ರವರು 2023 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ್ದ ಅತ್ಯುತ್ತಮ ಸೇವೆಗಾಗಿ ಇವರನ್ನು ಗುರುತಿಸಿ, ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.