ಬಿ.ಸಿ.ರೋಡ್ ಪದ್ಮ ಕಾಂಪ್ಲೆಕ್ಸ್ ಅಡಿಭಾಗದಲ್ಲಿ ಮಟ್ಕಾ ದಂಧೆ. ಬಂಟ್ವಾಳ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ

ಕರಾವಳಿ

ಬಂಟ್ವಾಳ ತಾಲೂಕು ಬಿ ಮೂಡ ಗ್ರಾ,ಮದ ಪದ್ಮಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ, ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದಾಗ, ವಿಜಯ್ ಪ್ರಸಾದ್ DYSP ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಮಟ್ಕಾ ವ್ಯವಹಾರ ನಡೆಸುತ್ತಿದ್ದ ಸಜೀತ್ .ಕೆ ಪಾವೂರು, ಮಂಜೇಶ್ವರ, ವಿಶಾಲ್ ಸಿ.ಉಚ್ಚಿಲ್, ಕೆಪಿತಾನಿಯೋ ಶಾಲಾ ಬಳಿ, ಮಂಗಳೂರು. ಸುನೀಲ್ ಕುಮಾರ್, ಮಹಾಲಿಂಗೇಶ್ವರ ಹತ್ತಿರ, ಬಡ್ಡಹಿತ್ತಲು, ಮಂಜೇಶ್ವರ, ಕೇರಳ ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೃತ್ಯಕ್ಕೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳನ್ನು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, ಮೊಬೈಲ್ ಪೋನ್ ಗಳನ್ನುಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ 70,505/-ರೂಗಳಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 139/2024 ಕಲಂ: 78(3) KP act ರಂತೆ ಪ್ರಕರಣ ದಾಖಲಾಗಿರುತ್ತದೆ.