ಮಂಗಳೂರು ಎ.ಸಿ ಕಚೇರಿ: ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್.!

ಕರಾವಳಿ

ಬನ್ನೂರು ಕುರಿ ಮಾಂಸ, ಅಂಜಲ್, ಮಾಂಜಿಯಿಂದ ಬಲೆ ಬೀಸಿ, ಮಂಕು ಬೂದಿ ಎರಚುವ ಕನಕಪುರದ ಕೊಕ್ಕೆ

ಕನಕಪುರ ಮೂಲದ ಮಹೇಶ ನಿಯೋಜನೆ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ. ಎ.ಸಿ ಸಾಹೇಬ್ರ ಆತ್ಮೀಯ! ಎಂಟು ತಿಂಗಳ ಹಿಂದೆ ಪುತ್ತೂರು ತಾಲೂಕು ಕಚೇರಿಯಲ್ಲಿ FDA ಆಗಿದ್ದಾಗ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ಮಾಡಿ ದೊಡ್ಡ ರಾದ್ಧಾಂತ ಎಬ್ಬಿಸಿದ್ದ. ಪೊಲೀಸರಿಂದ ಪೆಟ್ಟು ತಿಂದು ಕೊನೆಗೂ ರಾಜಿ ಪಂಚಾತಿಕೆ ಮೊರೆ ಹೋಗಿ ಪರಿಶಿಷ್ಟ ಜಾತಿಯವನ ಕಾಲು ಹಿಡಿದು ಕೇಸು ಹಿಂಪಡೆಸಿದ್ದ ಅನ್ನುವ ಮಾತುಗಳು ಈಗಲೂ ಪುತ್ತೂರಿನಲ್ಲಿ ಚಾಲ್ತಿಯಲ್ಲಿದೆ.

ಈ ಮಹೇಶ ದಿನಾಲೂ ಮಂಗಳೂರಿನಿಂದ ಪುತ್ತೂರಿಗೆ ಹೋಗಿ FDA ಕೆಲಸ ಮಾಡುತ್ತಿದ್ದ. ಮಂಗಳೂರಿನ ADC ಅವರಿಗೆ ವಾರಕ್ಕೊಮ್ಮೆ ಬನ್ನೂರು ಕುರಿ ಮಾಂಸ, ಅಂಜಲ್, ಮಾಂಜಿ, ಐಡಿ ಕೊಟ್ಟು ಅಪರ ಜಿಲ್ಲಾಧಿಕಾರಿಯನ್ನೇ ಬಲೆಗೆ ಬೀಳಿಸಿದ್ದ ಅನ್ನುವ ಪಿಸುಮಾತುಗಳಿವೆ. ADC ಯನ್ನೇ ಆತ್ಮೀಯನಾಗಿಸಿಕೊಂಡು ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ FDA ಆಗಿ ಸೇರಿಕೊಂಡ. ಈ ಮೊದಲು ಇದೇ ಜಾಗದಲ್ಲಿದ್ದ ವ್ಯಕ್ತಿ ಮಹೇಶನಿಗಾಗಿ ಜಾಗ ತೆರವು ಮಾಡಬೇಕಾಯಿತು. ADC ಯನ್ನೇ ಮಂಕುಬೂದಿ ಎರಚಿದವನಿಗೆ ಇನ್ನು AC ಏನು ಮಹಾ? ಎ.ಸಿ ಅವರಿಗೆ ಅತ್ಯಂತ ಆತ್ಮೀಯವಾಗಿ ಬಿಟ್ಟ‌. ಎ.ಸಿ ಸಾಹೇಬ್ರ ಎಲ್ಲಾ ವಹಿವಾಟು ನೋಡಿಕೊಳ್ಳುವುದು ಇದೇ ಕೊಕ್ಕೆ ಮಹೇಶ.

ಸಹಾಯಕ ಆಯುಕ್ತರ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ವಕೀಲರನ್ನು ಆಯುಕ್ತರ ಭೇಟಿಗೆ ಅವಕಾಶನೇ ಈತ ಕೊಡಲ್ಲ. ಸತಾಯಿಸುತ್ತಾನೆ ಅನ್ನುವ ಆರೋಪ ಇದೆ. ಇದು AC ಮತ್ತು ಕೊಕ್ಕೆ ನಡುವೆ ನಡೆದಿರುವ ಸೆಟ್ಟಿಂಗ್ ಎಂಬ ಮಾತು ಕೇಳಿ ಬರುತ್ತದೆ. ಸುಲಭದಲ್ಲಿ AC ಕೈಗೆ ಸಿಕ್ಕರೆ ಏನೂ ಕಮಾಯಿ ಆಗಲ್ಲ. ಕಾದು ಕಾದು ಸುಸ್ತಾದ ನಂತರ ಪಾರ್ಟಿ ತನ್ನಿಂತಾನೇ ತನ್ನ ಬಳಿ ಬರುತ್ತದೆ. ಆಗ ದೊಡ್ಡ ಕಮಾಯಿ ಮಾಡಬಹುದು.

ಈತನಿಗೆ ತಿಂಗಳಿಗೆ ಇರುವುದು ಬರೀ ಮೂವತ್ತೈದು ಸಾವಿರ ಸಂಬಳವಂತೆ. ಮಂಗಳೂರು ಸಿಟಿಯ ಪಕ್ಕದಲ್ಲಿರುವ ಪದವು ಎಂಬಲ್ಲಿ ಜಾಗ ಖರೀದಿಸಿ ಭವ್ಯ ಬಂಗಲೆ ನಿರ್ಮಿಸಿದ್ದಾನಂತೆ. ಮೂವತ್ತು ಸಾವಿರ ಸಂಬಳದಿಂದ ಇದು ಮಾಡಲು ಸಾಧ್ಯವೇ? ಗಿಂಬಳ ಎಷ್ಟಿರಬಹುದು ನೀವೇ ಯೋಚಿಸಿ? ಈತ ಕುಡುಪಿನಲ್ಲಿ VA ಆಗಿದ್ದಾಗ 94C, 94CC ಹಕ್ಕುಪತ್ರದ ಜಮೀನನ್ನು ಫಲಾನುಭವಿಗಳ ಬದಲಿಗೆ ಲಂಚ ತೆಗೆದುಕೊಂಡು ಶ್ರೀಮಂತರಿಗೆ ಮಾಡಿಕೊಡುತ್ತಿದ್ದ ಅನ್ನುವ ಆರೋಪ ಕೇಳಿ ಬಂದಿತ್ತು. ದುಡ್ಡಿಗಾಗಿ ಫೈಲನ್ನೇ ಪೆಂಡಿಂಗ್ ಇಡುವ ಈತ ಇಂಗ್ಲೀಷ್ ಓದಲು ಬರುವುದಿಲ್ಲವಂತೆ. ಇಂತಹವರನ್ನು ಅಪರ ಜಿಲ್ಲಾಧಿಕಾರಿ (ADC) ಎಸಿ ಕಚೇರಿಗೆ ಹಾಕಲು ಕಾರಣವೇನು?