ಸಮೀರ್ ಕಡಪ್ಪರ ಹತ್ಯೆ ಪ್ರಕರಣ: ಕಷ್ಟಡಿಯಲ್ಲಿದ್ದ ಆರೋಪಿಗಳು ಸೋಮವಾರ ನ್ಯಾಯಾಲಯಕ್ಕೆ; ಪ್ರಮುಖ ಸೂತ್ರಧಾರನ ಬಂಧನ ಯಾವಾಗ.?

ಕರಾವಳಿ

ಉಳ್ಳಾಲ ಕಡಪ್ಪರ ನಿವಾಸಿ ರೌಡಿ ಶೀಟರ್ ಸಮೀರ್ ಹತ್ಯೆಗೆ ಸಂಬಂಧಿಸಿದಂತೆ ಟಾರ್ಗೆಟ್ ಇಲ್ಯಾಸ್ ಭಾವ ಸುರತ್ಕಲ್ ಕೃಷ್ಣಾಪುರದ ಮುಹಮ್ಮದ್ ನೌಶಾದ್, ಕಿನ್ಯಾ ನಿವಾಸಿ ನಿಯಾಝ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು, ಕಾಪು ಮಜೂರಿನ ಇಕ್ಬಾಲ್ ಯಾನೆ ಇಕ್ಕು ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಈವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದರು. ಹತ್ಯೆಗೆ ಸಂಬಂಧಿಸಿ ಪ್ರಮುಖ ಸೂತ್ರಧಾರಿಯ ಬಂಧನ ಇನ್ನಷ್ಟೇ ಬಾಕಿಯಿದೆ.

ಅಗಸ್ಟ್ 11 ರ ತಡರಾತ್ರಿ ಆತ್ಮೀಯ ಪರಿಚಿತ ರೌಡಿಯೊಬ್ಬನ ಫೋನ್ ಕರೆಗೆ ತೊಕ್ಕೊಟ್ಟು ಕಲ್ಲಾಪು ರೆಸ್ಟೋರೆಂಟ್ ಬಳಿ ಕಾರು ನಿಲ್ಲಿಸಿದ್ದ ಸಮೀರ್ ನನ್ನು ಫಾಲೋ ಮಾಡಿ ಬಂದಿದ್ದ ಹಂತಕರು ಸಮೀರ್ ಕಾರಿನಿಂದ ಇಳಿಯುತ್ತಿದ್ದಂತೆ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದರು. ತನ್ನ ತಾಯಿಯನ್ನು ಪಂಪ್ ವೆಲ್ ಗೆ ಡ್ರಾಪ್ ಮಾಡಲು ಪತ್ನಿ, ಮಕ್ಕಳ ಜೊತೆ ಬಂದಿದ್ದ ಸಮೀರ್ ತಲವಾರಿಗೆ ಬಲಿಯಾಗಿದ್ದರು.

ಟಾರ್ಗೆಟ್ ಇಲ್ಯಾಸ್ ಹತ್ಯೆಗೆ ಪ್ರತೀಕಾರವಾಗಿ ಸಮೀರ್ ಹತ್ಯೆ ಎಂದು ರೂಮರ್ ಮಾಡಲಾಗಿದೆ ಅನ್ನುವುದು ಖಚಿತವಾದರೂ ಹತ್ಯೆಯ ಹಿಂದಿನ ನಿಗೂಢತೆ ಇನ್ನೂ ಬಯಲಾಗಿಲ್ಲ. ಉಪ್ಪಳದ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ 80 ಲಕ್ಷ ಲಪಟಾಯಿಸಿದ್ದ ಪ್ರಕರಣ, ಸ್ಥಳೀಯವಾಗಿ ಸಮೀರ್ ಇನ್ನೋರ್ವ ರೌಡಿಯನ್ನು ಮೀರಿಸಿ ಬಲಾಢ್ಯವಾಗಿ ಬೆಳೆಯುತ್ತಿರುವ ವಿಷಯ ಕೂಡ ಹತ್ಯೆಯ ಹಿಂದೆ ಥಳುಕು ಹಾಕಿಕೊಂಡಿದೆ. ಹೆಣ್ಣಿನ ವಾಸನೆಯು ಹತ್ಯೆಯ ಹಿಂದಿದೆ. ಒಟ್ಟಾರೆ ಪ್ರಕರಣದ ನಿಗೂಢತೆ ಬಗ್ಗೆ ಪೊಲೀಸರು ಇನ್ನೂ ಕೂಡ ಗುಟ್ಟು ಬಿಟ್ಟುಕೊಟ್ಟಿಲ್ಲ.

ಸಮೀರ್ ಹತ್ಯೆ ಆರೋಪಿಗಳಲ್ಲಿ ನಾಲ್ವರನ್ನು ಪೊಲೀಸ್ ಕಷ್ಟಡಿ ಪಡಕೊಂಡಿದ್ದು ನಾಳೆಗೆ ಅವಧಿ ಮುಗಿಯಲಿದೆ. ನಾಳೆ (ಸೋಮವಾರ) ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಮುಖ ಸೂತ್ರಧಾರಿ ಇನ್ನೂ ಕೂಡ ಪೊಲೀಸರ ಕೈಗೆ ಸಿಗದೆ ಭೂಗತನಾಗಿದ್ದಾನೆ. ಕೊಲೆಯ ರಹಸ್ಯ ಇನ್ನೂ ನಿಗೂಢವಾಗಿಯೆ ಉಳಿದಿದೆ.