ವಿಟ್ಲ ಠಾಣಾ ವ್ಯಾಪ್ತಿಯ ಗಾಂಜಾ ಅಡ್ಡೆಯೆಂದೇ ಕುಖ್ಯಾತಿ ಪಡೆದ ಉರಿಮಜಲು ಜಂಕ್ಷನಲ್ಲಿ ಆಟೋ ಚಾಲಕಗೆ ಡ್ರಗ್ಸ್ ವ್ಯಸನಿಯೊಬ್ಬ ಚೂರಿಯಿಂದ ಇರಿತು ಕೊಲೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಆಟೋ ಚಾಲಕ ಶರೀಫ್ ಎಂಬವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಡಿ ನಿವಾಸಿ ರಫೂಫ್ ಪುತ್ರ ಗಾಂಜಾ ಅಫೀಝ್@ ಅಪ್ಪಿ(22)ಎಂಬಾತ ಉರಿಮಜಲು ಜಂಕ್ಷನಲ್ಲಿ ಬಸ್ ತಂಗುದಾಣದಲ್ಲಿ ಕುಳಿತು ಮಹಿಳೆಯರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಅವಮಾನ ಮಾಡುತ್ತಿದ್ದ. ಆ ಸಂದರ್ಭ ಅದೇ ಪರಿಸರದಲ್ಲಿದ್ದ ಆಟೋ ಚಾಲಕ ಶರೀಫ್ ಎಂಬವರು ಅಪ್ಪಿಗೆ ಬುದ್ಧಿಮಾತು ಹೇಳಿದ್ದಾರೆನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಗಾಂಜಾ ವ್ಯಸನಿ ಅಪ್ಪಿ ಶರೀಫ್ ಮೇಲೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಗಾಯಾಳುವನ್ನು ಸ್ಥಳೀಯರು ತಕ್ಷಣವೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉರಿಮಜಲು ಜಂಕ್ಷನಲ್ಲಿ ಕೆಲಸಮಯಗಳಿಂದ ಯುವಕರು ಗಾಂಜಾ, ಎಂ.ಡಿ.ಎಂ.ಎ ಮಾದಕ ವಸ್ತುಗಳ ದಾಸರಾಗಿ ಸಭ್ಯ ನಾಗರಿಕರ ಪಾಲಿಗೆ ಕಂಠಕರಾಗುತ್ತಿದ್ದರೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಆರೋಪಿ ಅಪ್ಪಿಯನ್ನು ಸಾರ್ವಜನಿಕರ ಸಹಾಯದಿಂದ ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.