ಬ್ಯಾಂಕ್ಗಳು ಎಲ್ಲಾ ಅರ್ಹ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಹೆಚ್ಚು ಬೆಳೆ ಸಾಲವನ್ನು ಮಂಜೂರು ಮಾಡಬೇಕು ಎಂದು ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಮಹತ್ವದ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) 166ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಹೆಚ್ಚು ಸಾಲ ನೀಡುವತ್ತ ಬ್ಯಾಂಕ್ಗಳು ಗಮನ ಹರಿಸುವಂತೆ ಸೂಚಿಸಿದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ವ್ಯಾಪ್ತಿಗೆ ಎಲ್ಲಾ ಅರ್ಹ ಫಲಾನುಭವಿಗಳನ್ನು ತರಬೇಕು ಎಂದು ಸರಕಾರದ ಎಲ್ಲಾ ಇಲಾಖೆಗಳಿಗೆ ಮತ್ತು ಬ್ಯಾಂಕುಗಳಿಗೆ ಸೂಚಿಸಿದರು. ಪ್ರಸ್ತುತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಅವಧಿಯಲ್ಲಿ ಶೇ. 79ರಷ್ಟು ಕ್ರೆಡಿಟ್ ಠೇವಣಿ ಅನುಪಾತವನ್ನು ಸಾಧಿಸಿದ್ದಕ್ಕಾಗಿ ಎಲ್ಲಾ ಬ್ಯಾಂಕರ್‌ಗಳನ್ನು ಶ್ಲಾಘಿಸಿದರು.
ಆರ್‌ಬಿಐಯ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೆನ್ ಗುಪ್ತ, ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿದೇರ್ಶಕ ಭವೇಂದ್ರ ಕುಮಾರ್, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ| ವಿಶಾಲ್ ಆರ್, ನಬಾರ್ಡ್‌ನ ಮಹಾ ಪ್ರಬಂಧಕ ಪಿ.ಸಿ. ದಾಶ್, ಎಸ್‌ಎಲ್‌ಬಿಸಿಯ ಸಂಚಾಲಕ ಕೆ.ಜೆ. ಶ್ರೀಕಾಂತ್ ಸಭೆಯಲ್ಲಿ ಉಪಸ್ಥಿತರಿದ್ದರು.