ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಆಗಸ್ಟ್ 12ರಂದು ನಡೆದಿದ್ದ ಬಸ್ ಮತ್ತು ಆಕ್ಟಿವಾ ನಡುವೆ ಅಪಘಾತದಲ್ಲಿ ಗಾಯಗೊಂಡು ಅಸ್ಪತ್ತೆಗೆ ದಾಖಲಾಗಿದ್ದ ಕಟ್ಟತ್ತಿಲ ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ನಿಧನ.
ಮಂಗಳೂರಿಗೆ ಕಡೆ ಹೋಗುತ್ತಿದ್ದ ಮಹೇಶ್ ಖಾಸಗಿ ಬಸ್-ಆಕ್ಟಿವಾ ನಡುವೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಟ್ಟತ್ತಿಲ ನಿವಾಸಿ ಮುಝಾಂಬಿಲ್(30)
ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಾಯಾಳು ಮುಝಾಂಬಿಲ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ.