ಮಸೂದ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ ಇಫ್ತಿಕಾರ್ ಅಲಿ ಅವರನ್ನು ಕುದ್ರೋಳಿಯಲ್ಲಿ ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಸನ್ಮಾನ ನೆರವೇರಿಸಿ ಮಾತನಾಡಿದರು. ಸ್ವಂತ ಸಾಮರ್ಥ್ಯದಿಂದ ಇಫ್ತಿಕಾರ್ ಅಲಿ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂಥ ಕ್ರಿಯಾಶೀಲ, ಸ್ಪೂರ್ತಿದಾಯಕ ಯುವಕರ ಅಗತ್ಯ ಸಮಾಜಕ್ಕೆ ಅತ್ಯಗತ್ಯ. ಆ ಮೂಲಕ ಸಮಾಜದ ಸೇವೆ ನಡೆಯಬೇಕು ಎಂದರು. ಡಾ. ಯು.ಟಿ ಇಫ್ತಿಕಾರ್ ಅಲಿ ಸನ್ಮಾನ ಸ್ವೀಕರಿಸಿ, ಮಸೂದ್ ರವರು ಹಿರಿಯರು, ಅವರ ಸಾಧನೆಯ ಮುಂದೆ ನಮ್ಮದೇನೂ ಇಲ್ಲ. ನನ್ನ ತಂದೆಯ ಒಡನಾಡಿ ಮತ್ತು ಅಣ್ಣ ಖಾದರ್ ರವರಿಗೆ ಸಲಹೆಗಾರ ಹಾಗೂ ಸಮುದಾಯದ ನಾಯಕ. ಅವರ ಆಶೀರ್ವಾದ ನಮಗೆ ಸದಾ ಬೇಕು ಎಂದರು.
ಟ್ರಸ್ಟ್ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಮಸೂದ್, ಕೋಶಾಧಿಕಾರಿ ಗುಲ್ಶನ್ ಪರ್ವಿನ್, ಮಸೂದ್ ಅವರ ಪತ್ನಿ ಮಝಾಹಿರ್ ಎಂ. ಮಸೂದ್, ಮಸೂದ್ ಫಿಸಿಯೋಥರಪಿ ಕಾಲೇಜು ಪ್ರಿನ್ಸಿಪಾಲ್ ಡಾ. ಅನಿಶಾ ರಫೀಕ್ ಪದರಂಗಿ ಉಪಸ್ಥಿತರಿದ್ದರು. ಮಸೂದ್ ಕಾಲೇಜ್ ಆಂಡ್ ಸ್ಕೂಲ್ ಆಫ್ ನರ್ಸಿಂಗ್ ನ ಪ್ರಿನ್ಸಿಪಾಲ್ ಡಾ. ವೀಣಾ ಗ್ರೆಟ್ಟಾ ತಾವ್ರೊ ಸ್ವಾಗತಿಸಿದರು. ಉಪ ಪ್ರಿನ್ಸಿಪಾಲ್ ವಿಜೇತಾ ಕೊಟ್ಟಾರಿ ಸನ್ಮಾನ ಪತ್ರ ವಾಚಿಸಿದರು. ಸಹಾಯಕ ಪ್ರಾಧ್ಯಾಪಕಿ ಮೇಘನಾ ಎನ್. ಬಾಳಿಗಾ ಕಾರ್ಯಕ್ರಮ ನಿರೂಪಿಸಿದರು. ನಿಶಾ ಶರಣ್ ವಂದಿಸಿದರು.