ಯುವಕನ ಅಪಹರಿಸಿ ಮನೆಯೊಳಗೆ ಕೂಡಿಹಾಕಿ ಹಲ್ಲೆ; ಸಾಮಾಜಿಕ ತಾಣದಲ್ಲಿ ವೀಡಿಯೋ ವೈರಲ್.

ಕರಾವಳಿ

ತಂಡವೊಂದು ಯುವಕನ ಅಪಹರಿಸಿ ಮನೆಯೊಳಗೆ ಕೂಡಿಹಾಕಿ ಮನಬಂದಂತೆ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ತಂಡದಿಂದ ಹಲ್ಲೆಗೊಳಗಾದ ಯುವಕ ಕಲ್ಲಡ್ಕ ಸಮೀಪದ ಬೋಳಂತೂರು ನಿವಾಸಿ ರಹೀಂ ಎಂದು ತಿಳಿದು ಬಂದಿದೆ. ಹುಡುಗಿ ವಿಚಾರದಲ್ಲಿ ರಹೀಂನನ್ನು ಅಪಹರಿಸಿದ ಯುವಕರು ಪುತ್ತೂರು ಹೊರವಲಯದ ಮನೆಯೊಂದರಲ್ಲಿ ಕೂಡಿಹಾಕಿ ಥಳಿಸುತ್ತಿರುವ ದೃಶ್ಯ ಬುಧವಾರ ಸಂಜೆಯಿಂದ ವೈರಲಾಗುತ್ತಿದ್ದು ಈ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.