ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ॥ ಜಿ. ಸಂತೋಷ್ ಕುಮಾರ್ ನಿಯತ್ತಿನ, ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟರ ವಿರುದ್ಧ ಯಾರ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ದಿಟ್ಟ, ನೇರ ನಡೆ-ನುಡಿಯ ಅಧಿಕಾರಿ ADC ಸಂತೋಷ್ ಕುಮಾರ್. ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯ FDA ಕೊಕ್ಕೆ ಮಹೇಶನನ್ನು ಎತ್ತಂಗಡಿ ಮಾಡುವಲ್ಲಿ ಸಫಲರಾಗಿದ್ದಾರೆ. ಕೊಕ್ಕೆ ಮಹೇಶನ ಬಗ್ಗೆ ಸಾರ್ವಜನಿಕರು ಬಹಳ ಕಿರಿಕಿರಿ ಅನುಭವಿಸುತ್ತಿದ್ದರು. ಮಾತ್ರವಲ್ಲದೆ ಈತ ಸಾರ್ವಜನಿಕರನ್ನು ಬಹಳ ಸತಾಯಿಸುತ್ತಿದ್ದ. ಈತನ ವಿರುದ್ದ ಹಲವಾರು ದೂರುಗಳಿದ್ದವು. ಇದೇ ಕೊಕ್ಕೆ ಮಹೇಶ ADC ಅವರ ಬಗ್ಗೆಯೂ ಇಲ್ಲಸಲ್ಲದ ಕಟ್ಟುಕತೆಗಳನ್ನು ಕಟ್ಟಿ ಹರಿಯಬಿಡುತ್ತಿದ್ದ. ಆದರೆ ಅಪರ ಜಿಲ್ಲಾಧಿಕಾರಿ ಸಂತೋಷ್ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಿಸಿ ಭೇಷ್ ಅನ್ನಿಸಿಕೊಂಡಿದ್ದರು. ಇದೀಗ ಅಪರ ಜಿಲ್ಲಾಧಿಕಾರಿ ಆಗಿಯೂ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಜನಾನುರಾಯಿಯಾಗಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಉಪ ವಿಭಾಗಾಧಿಕಾರಿ ಆಗಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದ ಡಾ॥ ಜಿ. ಸಂತೋಷ್ ಕುಮಾರ್ ಅವರು ದ.ಕ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಗಿ ಹಾಗೂ ಪಾಲಿಕೆಯ ಜಂಟಿ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿರುವ ಅಪಾರ ಅನುಭವ ಹೊಂದಿದ್ದಾರೆ. ಮಾತ್ರವಲ್ಲ ತಾಳ್ಮೆಯಿಂದ ನಾಗರಿಕರೊಂದಿಗೆ ವ್ಯವಹರಿಸಿ, ಜನರ ಅಹವಾಲನ್ನು ಸ್ವಿಕರಿಸಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ.
ADC ಡಾ॥ ಜಿ. ಸಂತೋಷ್ ಕುಮಾರ್ ಪ್ರಬಲ ಜಾತ್ಯಾತೀತ ಮನಸ್ಸುಳ್ಳ ಅಧಿಕಾರಿ. ಎಡಪಂಥೀಯ ಚಿಂತನೆಗಳನ್ನು ಹೊಂದಿದವರು. ಇದೇ ಕಾರಣಕ್ಕೆ ಕೋಮುವಾದಿ ಮನಸ್ಥಿತಿಯ ರಾಜಕಾರಣಿಗಳು ಅಪರ ಜಿಲ್ಲಾಧಿಕಾರಿ ಮೇಲೆಯೇ ಕೆಂಗಣ್ಣು ಬೀರುವುದುಂಟು. ಆದರೆ ತನ್ನ ಸಿದ್ಧಾಂತದಲ್ಲಿ ಎಂದೂ ರಾಜಿ ಮಾಡಿಕೊಳ್ಳದ, ಬಡವರ, ದೀನ ದಲಿತರ, ನೊಂದವರ ಪರವಾಗಿ ಕೆಲಸ ಮಾಡುತ್ತಿರುವ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಕೋಮುವಾದಿ ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ. ಆದರೆ ಪ್ರಜಾಪ್ರಭುತ್ವವಾದಿಗಳ, ಸಂವಿಧಾನ ಪ್ರಿಯರ ಪಾಲಿಗೆ ಅವರೊಬ್ಬರು ರಕ್ಷಕರು. ಇಂತಹ ಚಿಂತನೆಯುಳ್ಳ ಅಧಿಕಾರಿಗಳು ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ಪಡೆಯಲಿ. ತಾವುಗಳು ಜಾತ್ಯತೀತ ಅನ್ನುವ ಸರಕಾರಗಳು ಇಂತಹ ಅಧಿಕಾರಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಿದೆ. ಇಂತಹ ದಿಟ್ಟ ಅಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸೋಣ.