ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.!
ಐದು ಮೊಬೈಲ್,13ಲಕ್ಷ ನಗದು ವಶ.! ಉಪೇಂದ್ರ ಭಟ್ ಎಂಬವರಿಗೆ ವಾಟ್ಸಪ್ ಕಾಲ್ ಮಾಡಿ ನಕಲಿ ಕಂಪನಿಗೆ ಹಣ ಹಾಕಿಸಿದ್ದ ಕಿರಾತಕರು.! 33ಲಕ್ಷ ಹತ್ತು ಸಾವಿರ ಹಣ ನಕಲಿ ಕಂಪನಿಯ ಅಕೌಂಟ್ ಗೆ ಹಣ ಹೂಡಿದ್ದ ಉಪೇಂದ್ರ ಭಟ್.!
ಉಡುಪಿ CEN ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ.! ಉಡುಪಿ ಎಸ್ಪಿ ಅರುಣ್ ಕುಮಾರ್, ಹೆಚ್ಚುವರಿ ಎಸ್ಪಿ ಸಿದ್ದಲಿಂಗಯ್ಯ ಮಾರ್ಗದರ್ಶನದಲ್ಲಿ ವಂಚಕರು ಲಾಕ್.!
ಪುತ್ತೂರಿನ ಮಹಮ್ಮದ್ ಮುಸ್ತಫಾ ಪಿ. (36), ಕುಂಬ್ಳೆಯ ಖಾಲೆಡ್ಜ್. ಬಿ, (39 ), ಕಾಸರಗೋಡಿನ ಮೊಹಮ್ಮದ್ ಸಫಾನ್ ಕೆ.ಎ. (22), ಮಂಗಳೂರಿನ ಸತೀಶ್ ಶೇಟ್(22 )ಎಂಬವರನ್ನು ವಶಕ್ಕೆ ಪಡೆದು 5 ಮೊಬೈಲ್ ಹಾಗೂ 13 ಲಕ್ಷ ರೂ. ನಗದು ವಶ. ಪ್ರಕರಣದ ಪ್ರಮುಖ ಸೂತ್ರಧಾರಿಗಳು ಎಸ್ಕೇಪ್.! ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಮಾರ್ಗದರ್ಶನದಲ್ಕಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಯ್ಯ ಟಿ.ಎಸ್., ಪರಮೇಶ್ವರ ಹೆಗಡೆ, ಸೆನ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್, ಎಎಸ್ಐ ರಾಜೇಶ್, ಸಿಬ್ಬಂದಿಗಳಾದ ಪ್ರವೀಣ ಕುಮಾರ್, ಅರುಣ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘವೇಂದ್ರ, ಪ್ರಶಾಂತ್ ಪ್ರಸನ್ನ ಸಿ ಸಲ್ಮಾನ್, ಚಾಲಕ ಸುದೀಪ್ ಕಾರ್ಯಾಚರಣೆಯಲ್ಲಿ ಬಾಗವಹಿಸಿದ್ದರು.