ಆಸ್ಪತ್ರೆಗಳ ಭದ್ರತೆಯ ಬಗ್ಗೆ ಎದ್ದಿರುವ ಪ್ರಶ್ನೆಗಳ ನಡುವೆ, ನೋಯ್ದಾದಿಂದ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. ನೋಯ್ಡಾದ ಸೆಕ್ಟರ್ 94 ರಲ್ಲಿರುವ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ, ಉದ್ಯೋಗಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶವಾಗಾರದಲ್ಲಿ ಉದ್ಯೋಗಿ ಮತ್ತು ಮಹಿಳೆ ಕಾಮಕೇಳಿಯಲ್ಲಿ ತೊಡಗಿದ್ದರೆ, ಈ ವೇಳೆ ಆತನ ಮತ್ತೊಬ್ಬ ಸ್ನೇಹಿತ ವಿಡಿಯೋ ಮಾಡುತ್ತಲೇ ಇದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 2 ನಿಮಿಷ 21 ಸೆಕೆಂಡುಗಳ ವೀಡಿಯೊದಲ್ಲಿ, ಪೋಸ್ಟ್ ಮಾರ್ಟಮ್ ಹೌಸ್ನ ಡೀಪ್ ಫ್ರೀಜರ್ ಕೋಣೆಯಲ್ಲಿ ಪುರುಷನೊಬ್ಬ ಮಹಿಳೆಯೊಂದಿಗೆ ಸೆಕ್ಸ್ ಮಾಡುತ್ತಿದ್ದಾನೆ. ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈಗ ತನ್ನ ಸರದಿ ಎಂದು ಹೇಳುವುದನ್ನು ಸಹ ಕೇಳಬಹುದು. ಈ ಕೋಣೆಯಲ್ಲಿ, ಮೃತ ದೇಹಗಳನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗುತ್ತದೆ.
ಈ ಪೋಸ್ಟ್ ಮಾರ್ಟಮ್ ಹೌಸ್‌ನಲ್ಲಿ ಮಹಿಳಾ ಉದ್ಯೋಗಿಯನ್ನು ನಿಯೋಜಿಸಿಲ್ಲ. ಪರಿಸ್ಥಿತಿ ಹೀಗಿದ್ದರೂ ಮಹಿಳೆಯನ್ನು ಹೊರಗಿನಿಂದ ಕರೆತರಲಾಗಿದೆ ಎಂದು ಹೇಳಲಾಗುತ್ತಿದೆ. ಹೊರಗಿನ ಮಹಿಳೆ ಇಲ್ಲಿಗೆ ಹೇಗೆ ಎಂಟ್ರಿ ಕೊಟ್ಟರು ಎಂಬ ಪ್ರಶ್ನೆ ಮೂಡಿದೆ. ಕಾನೂನು ಅವಶ್ಯಕತೆಗಳ ಪ್ರಕಾರ ಸಂರಕ್ಷಿಸಲಾದ ಮೃತ ದೇಹಗಳನ್ನು ಸಹ ಹಾಳುಮಾಡಬಹುದು. ಮಹಿಳೆಯೊಂದಿಗಿನ ಸಂಬಂಧವನ್ನು ಆಕೆಯ ಒಪ್ಪಿಗೆ ಮೇರೆಗೆ ಮಾಡಲಾಗಿದೆಯೇ ಅಥವಾ ಬಲವಂತವಾಗಿ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.