156 ಔಷಧಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಈ ಔಷಧಗಳು ಮನುಷ್ಯನ ಶರೀರದ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರುತ್ತದೆ.

ರಾಷ್ಟ್ರೀಯ

ಜ್ವರ, ತಲೆನೋವು, ಮೈಕೈ ನೋವು ಅಂತ ನುಂಗುವ 156 ಔಷಧಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಆ ಔಷಧಗಳು ಮನುಷ್ಯನ ಶರೀರದ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರುತ್ತದೆ, ಹೀಗಾಗಿ ಬ್ಯಾನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಈಗಾಗಲೇ ಉತ್ಯಾದನಾ ಕಂಪನಿ, ಮಾರ್ಕೆಟಿಂಗ್‌ನವರಿಗ ಗೆಜೆಟ್ ನೋಟೀಸ್‌ ನೀಡಲಾಗಿದ್ದು ಯಾವುದೇ ಮೆಡಿಕಲ್‌ ಶಾಪ್‌ಗಳು ಈ ಬಗೆಯ ಔಷಧಗಳನ್ನು ಮಾರಾಟ ಮಾಡುವಂತಿಲ್ಲ.ಅವುಗಳಲ್ಲಿ ಆಯಂಟಿಬಯೋಟಿಕ್, ಆಯಂಟಿಅಲರ್ಜಿಸ್, ಮಲ್ಟಿವಿಟಮಿನ್ಸ್, ಹೈಪರ್‌ ಟೆನ್ಷನ್‌ಗೆ ತೆಗೆದುಕೊಳ್ಳುವ ಹಲವು ಔಷಧಗಳನ್ನು ಬ್ಯಾನ್‌ ಮಾಡಲಾಗಿದೆ.

ಈ ಔಷಧಗಳ ಪಟ್ಟಿಯಲ್ಲಿ Mefenamic Acid, ಪ್ಯಾರಾಸಿಟಮೋಲ್‌, ನೋವು ಕಡಿಮೆಯಾಗುವ ಇಂಜೆಕ್ಷನ್‌, ಬೇರೆ ಬೇರೆ ಕಾಯಿಲೆಗಳಿಂದ ಉಂಟಾದ ಊತ ಕಡಿಮೆ ಮಾಡುವ ಇಂಜೆಕ್ಷನ್‌ ಎಲ್ಲವೂ ಸೇರಿದೆ. ಮಧುಮೇಹಿಗಳು ತೆಗೆದುಕೊಳ್ಳುವ ಔಷಧಗಳು ಕೂಡ ಈ ಬ್ಯಾಬ್‌ ಔಷಧಗಳ ಲಿಸ್ಟ್‌ನಲ್ಲಿದೆ.

ಬ್ಯಾನ್‌ ಆಗಿರುವ ಔಷದಗಳನ್ನು ನಾವುಗಳು ಹೆಚ್ಚಾಗಿ ಬಳಸುತ್ತಿದ್ದೆವು. ಈ ಔಷದಿಗಳು ಮನುಷ್ಯ ಜೀವಕ್ಕೆ ಅಡ್ಡ ಪರಿಣಾಮ ಬೀರುತ್ತಿತ್ತು, ಅದುದರಿಂದ ಸರಕಾರ ಈ ಔಷದಿಗಳನ್ನು ನೀಷೇಧಿಸಿದೆ.