ಸಾರ್ವಜನಿಕ ಶಿಕ್ಷಣ ಇಲಾಖೆಯ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ಬಾಲಕ-ಬಾಲಕಿಯರ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಟ್ಲದ ಸೈಂಟ್ ರೀಟಾ ಶಾಲೆ

ಕರಾವಳಿ

ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪ್ರೌಢಶಾಲಾ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಕೆಪಿಎಸ್‌ ಸರಕಾರಿ ಪ್ರೌಢಶಾಲೆ ಕನ್ಯಾನದಲ್ಲಿ ನಡೆಯಿತು.

ಹುಡುಗರ ವಿಭಾಗದಲ್ಲಿ ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿಠಲ ಪ್ರೌಢಶಾಲೆ ವಿಟ್ಲ ದ್ವಿತೀಯ ಸ್ಥಾನವನ್ನು ಗಳಿಸಿದೆ

ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ ಪಡೆದುಕೊಂಡಿದೆ ದ್ವಿತೀಯ ಸ್ಥಾನವನ್ನು ಸೂರ್ಯ ಸರಕಾರಿ ಪ್ರೌಢಶಾಲೆ ಗಳಿಸಿದೆ.

ಒಟ್ಟು 15 ಹುಡುಗರ ತಂಡ ಹಾಗೂ 9 ಹುಡುಗಿಯರ ತಂಡವು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ನಾಲ್ಕು ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ರಾಜ್ಯಮಟ್ಟದ ತೀರ್ಪುಗಾರರು ಸುರೇಶ್‌ ಶೆಟ್ಟಿ, ರಾಜೇಂದ್ರ ರೈ, ಉಮಾನಾಥ ರೈ, ರಾಜ್ಯ ತೀರ್ಪುಗಾರರಾದ ಮೋಹನ್‌ ಬೈರಿಕಟ್ಟೆ ಹಾಗೂ ವಲಯದ ಎಲ್ಲಾ ದೈಹಿಕ ಶಿಕ್ಷಕರು ಈ ಪಂದ್ಯಾಟವನ್ನು ನಡೆಸಿಕೊಟ್ಟರು.