ಲಾಕರ್‌ ನಲ್ಲಿದ್ದ 26 ಕೆ.ಜಿ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ ಬ್ಯಾಂಕ್ ಮ್ಯಾನೇಜರ್

ರಾಷ್ಟ್ರೀಯ

ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಮಾಜಿ ಮ್ಯಾನೇಜರ್ ಎಸ್. ಮಠ ಜಯಕುಮಾರ್ ಕೃತ್ಯ ಎಸಗಿದ ಆರೋಪಿ

ಲಾಕರ್‌ ನಲ್ಲಿದ್ದ 26 ಕೆ.ಜಿ ಚಿನ್ನದ ಆಭರಣಗಳನ್ನು ಬ್ಯಾಂಕ್ ಮ್ಯಾನೇಜರ್ ಕಳ್ಳತನ ಮಾಡಿರುವ ಘಟನೆ ಕೇರಳದ ಕೋಝಿಕ್ಕೋಡ್‌ನ ವಡರದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನಡೆದಿದೆ.
4.6 ಕೆ.ಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಳಿದ ಬಂಗಾರ ಏನಾಗಿದೆ ಎಂದು ಗೊತ್ತಿಲ್ಲ ಎಂದು ಹೇಳಲಾಗುತ್ತಿದೆ. ವಡಗರದ ಎಡೋಡಿಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಯ ಮಾಜಿ ಮ್ಯಾನೇಜರ್ ಎಸ್. ಮಠ ಜಯಕುಮಾರ್ ಈ ಕೃತ್ಯ ಎಸಗಿದ ಆರೋಪಿ ಈತನನ್ನು ಬಂಧಿಸಲಾಗಿದೆ.

ಇದೇ ಜುಲೈ ತಿಂಗಳಿನಲ್ಲಿ ಈತನನ್ನು ಎರ್ನಾಕುಲಾಂಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಠ ಜಯಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕಿನಲ್ಲಿ ಕಳ್ಳತನ ಆಗಿರುವ ಕುರಿತು ಲೆಕ್ಕ ಮಾಡಲಾಗುತ್ತಿದೆ. ಒಟ್ಟು 26.8 ಕೆ.ಜಿ ಚಿನ್ನದ ಆಭರಣಗಳು ಬ್ಯಾಂಕಿನ ಲಾಕರ್​ನಿಂದ ನಾಪತ್ತೆಯಾಗಿದ್ದು, ಇವುಗಳ ಒಟ್ಟು ಮೌಲ್ಯ 17.5 ಕೋಟಿ ರೂಪಾಯಿಗಳು ಎನ್ನಲಾಗಿದೆ.

ಜಯಕುಮಾರ್ ಎರ್ನಾಕುಲಂನಲ್ಲಿ ಬ್ಯಾಂಕ್​ನ ಕೆಲಸಕ್ಕೆ ಹಾಜರಾಗದೆ ತೆಲಂಗಾಣದಲ್ಲಿ ಅಡಗಿಕೊಂಡಿದ್ದು, ಬ್ಯಾಂಕಿನ ಕೆಲಸಕ್ಕೆ ಜಯಕುಮಾರ್ ಬರುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ ವಿಶೇಷ ಪೊಲೀಸ್ ತಂಡ ಆತನನ್ನು ತೆಲಂಗಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ವೇಳೆ ಚಿನ್ನಾಭರಣಗಳನ್ನು ತಿರುಪ್ಪೂರ್‌ನ ಎರಡು ಖಾಸಗಿ ಬ್ಯಾಂಕ್ ಶಾಖೆಗಳಲ್ಲಿ ತನ್ನ ಸ್ನೇಹಿತ ಎನ್.ಕಾರ್ತಿಕ್ ಎಂಬಾತನ ಹೆಸರಿನಲ್ಲಿ ಅಡವಿಟ್ಟಿದ್ದಾನೆ. ಆರೋಪಿ ಬಾಯಿ ಬಿಡುತ್ತಿದ್ದಂತೆ ಪೊಲೀಸರು ತಿರುಪ್ಪೂರ್‌ಗೆ ಹೋದರೆ ಅಲ್ಲಿಂದ ಕಾರ್ತಿಕ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಎರಡು ಬ್ಯಾಂಕ್​ಗಳಲ್ಲಿ ಅಡವಿಟ್ಟಿದ್ದ 4.6 ಕೆ.ಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣಕ್ಕೆ ಸಂಬಂಧಿಸಿದ ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.